‘ವಿಭವ ವಾಲಪ್ಸ್‌‘ಗೆ ಚಾಂಪಿಯನ್ ಪಟ್ಟ

h18-badminton
Published on

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ಜಿಮ್‌ಖಾನ ಅಸೋಸಿಯೇಷನ್‌ನಲ್ಲಿ 2 ತಿಂಗಳಿಂದ ಆಯೋಜಿಸಿದ್ದ ಕರ್ನಾಟಕ ಜಿಮ್‌ಖಾನ ಪ್ರೀಮಿಯರ್ (ಕೆಜಿಪಿಎಲ್) ಸೀಜನ್ 3ನೇ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಶನಿವಾರ ಶ್ರೀ ಆದಿತ್ಯ ನಂದಕುಮಾರ ಒಡೆತನದ ‘ವಿಭವ ವಾಲಪ್ಸ್‌‘ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಮೈಕಲ್ ರಾಬರ್ಟ್ ಒಡೆತನದ ‘ಮೈಕ್ಸ್ ಅನ್‌ಮ್ಯಾಚೇಬಲ್ಸ್’ ತಂಡ ಎದುರು ನಡೆಸಿದ ಸೆಣಸಾಟದಲ್ಲಿ ‘ವಿಭವ ವಾಲಪ್ಸ್’ ತಂಡವು 3-2.5 ಅಂತರದಲ್ಲಿ ಗೆಲುವು ಸಾಧಿಸಿತು.
ಉತ್ತಮ ಆಟಗಾರ ಪ್ರಶಸ್ತಿಯನ್ನು ಸೂರಜ್ ತಿವಾರಿ, ತನ್ಮಯಿ, ಹರ್ಷಾ ಶೆಟ್ಟಿ, ಪವನ ಕುಲಕರ್ಣಿ, ಮೋಹನ ಜೋಶಿ, ರವೀಂದ್ರ ಹುಯಿಲ್ಯಾಳ, ರಾಜು ಹಬೀಬ, ಮಯೂರ ಸಜ್ಜನ್, ಡಾ. ಸುಹಾಸ ಕಲಘಟಗಿ, ಶೀನು ಕಾಟವೆ ಅವರಿಗೆ ನೀಡಲಾಯಿತು.
ಉದ್ಯಮಿ ಸಮುಂದರ್ ಸಿಂಗ್, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶ್ರೀ ದುರ್ಗಾ ಡೆವೆಲಪರ್ಸ್ ಎಂಡಿ ವೀರೇಶ ಉಂಡಿ, ಅಸೋಸಿಯೇಷನ್ ಅಧ್ಯಕ್ಷ ಎಚ್.ಎನ್. ನಂದಕುಮಾರ, ಉಪಾಧ್ಯಕ್ಷ ಗೋವಿಂದ ಜೋಶಿ, ಕಾರ್ಯದರ್ಶಿ ವೀರಣ್ಣ ಸವಡಿ, ಕೆಜಿಪಿಎಲ್ ಸಂಚಾಲಕ ಉದಯ ಬಾಡಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net