3.60 ಲಕ್ಷ ಭಕ್ತರಿಗೆ ಭೋಜನ ಪ್ರಸಾದ : ಚಂಪಾಷಷ್ಠಿ ಜಾತ್ರೆ ಸಂದರ್ಭದಲ್ಲಿ ವಿಶೇಷ ಅನ್ನದಾನ

New Project (21)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಚಂಪಾಷಷ್ಠಿ ಜಾತ್ರೋತ್ಸವದ ದಿನಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ಭೋಜನ ಪ್ರಸಾದ ಸ್ವೀಕರಿಸಿದ್ದಾರೆ. 3,60,216 ಭಕ್ತರಿಗೆ ಅನ್ನಪ್ರಸಾದ ವಿತರಣೆಯಾಗಿದೆ. 15,200 ಭಕ್ತರು ವಿಶೇಷ ಉಪಹಾರ ಸ್ವೀಕರಿಸಿದ್ದಾರೆ. ಸುಸೂತ್ರವಾಗಿ ಭಕ್ತರು ಶ್ರೀ ದೇವರ ಬೋಜನ ಪ್ರಸಾದ ಸ್ವೀಕರಿಸಲು ದೇವಳದ ಆಡಳಿತ ಎಲ್ಲ ವ್ಯವಸ್ಥೆ ಮಾಡಿತ್ತು. ಕ್ಷೇತ್ರದಲ್ಲಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಜಾತ್ರೆ ಪ್ರಧಾನ ದಿನಗಳಲ್ಲಿ ಪ್ರಸಾದ ಭೋಜನ ಸ್ವೀಕರಿಸಿದ್ದರು.

ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಎಲ್ಲ ವ್ಯವಸ್ಥೆ ಮಾಡಿದ್ದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಪರಿಶೀಲಿಸುತ್ತಿದ್ದರು. ಎಇಒ ಯೇಸುರಾಜ್, ಅಭಿಯಂತ ಉದಯ ಕುಮಾರ್ ಮತ್ತು ಸಿಬ್ಬಂದಿ ವರ್ಗ ಅವಿರತವಾದ ಶ್ರಮಿಸಿದ್ದರು. ಊರ ಮತ್ತು ಪರವೂರ ಸಂಘ ಸಂಸ್ಥೆಗಳು, ಶ್ರೀ ದೇವಳದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮತ್ತು ಭಕ್ತರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದರು. ಷಣ್ಮುಖ ಪ್ರಸಾದ ಭೋಜನ ಶಾಲೆಯಲ್ಲಿ ಶ್ರೀ ದೇವಳದ ದಿನೇಶ್ ಎಂ.ಆರ್., ತಂಬ ನಾಯರ್ ವ್ಯವಸ್ಥೆ ನಿರ್ವಹಿಸಿದರೆ, ಅಂಗಡಿ ಗುಡ್ಡೆಯಲ್ಲಿ ದೇವಣ್ಣ ಗೌಡ, ಮಹಾಬಲೇಶ್ವರ ದೋಳ, ಪುರುಷೋತ್ತಮ, ಭವಾನಿಶಂಕರ್, ಬಾಲಸುಬ್ರಹ್ಮಣ್ಯ ಮಾರರ್, ರವೀಂದ್ರ ಎನ್.ಎಸ್.ವ್ಯವಸ್ಥೆಗಳನ್ನು ನಿರ್ವಹಿಸಿದ್ದರು.

ವಿಶೇಷ ಭೋಜನ: ವಿಶೇಷ ದಿನಗಳಾದ ಲಕ್ಷದೀಪೋತ್ಸವ, ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತದಂದು ವಿಶೇಷ ಭಕ್ಷೃ ವಿತರಿಸಲಾಗಿದೆ. ಚಿತ್ರಾನ್ನ, ಕೋಸಂಬರಿ, ಉಪ್ಪಿನಕಾಯಿ, ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಮಜ್ಜಿಗೆ, ಮ್ಯಾಕ್ರೋನಿ ಪಾಯಸ, ಕೇಸರಿ ಬಾತ್, ಸೇವಿಗೆ ಪಾಯಸ, ಮಜ್ಜಿಗೆ ಹುಳಿ, ನವಣೆ ಪಾಯಸ, ಹಯಗ್ರೀವ, ಹಾಲು ಪಾಯಸ, ರವೆ ಲಾಡು, ಹೆಸರು ಬೇಳೆ ಸಾಬಕ್ಕಿ ಪಾಯಸ ವಿತರಣೆಯಾಗಿತ್ತು. ಪಂಚ ದಿನ ವಿವಿಧ ತರಕಾರಿಗಳ ಪಲ್ಯ, 15ಕ್ಕೂ ಅಧಿಕ ತರಕಾರಿಗಳನ್ನೊಳಗೊಂಡ ಸಾಂಬಾರು ಸೇರಿದಂತೆ ಸ್ವಾದಿಷ್ಟವಾದ ವಿಶೇಷ ಭೋಜನ ವಿತರಿಸಲಾಯಿತು.

ಭಕ್ತರಿಗೆ ವಿಶೇಷ ಖಾದ್ಯಗಳನ್ನೊಳಗೊಂಡ ಭೋಜನ ಪ್ರಸಾದ ವಿತರಣೆಯಾಗಿದೆ. ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿರುವುದು ಸಂತಸ ತಂದಿದೆ. ಜುಬಿನ್ ಮೊಹಪಾತ್ರ, ಕ್ಷೇತ್ರದ ಆಡಳಿತಾಧಿಕಾರಿ ಅಂಗಡಿಗುಡ್ಡೆಯಲ್ಲಿ ವಿಶೇಷ ಭೋಜನ ಸತ್ರ ನಿರ್ಮಿಸಲಾಗಿತ್ತು. ಪ್ರಮುಖ ಮೂರು ದಿನ ಬೆಳಗ್ಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಂತರ ಭಕ್ತರು ಯಾವುದೇ ಸಮಸ್ಯೆಗಳಿಲ್ಲದೆ ಭೋಜನ ಪ್ರಸಾದ ಸ್ವೀಕರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ https://www.vijayavani.net/ayyappa-dipotsava https://www.vijayavani.net/shrinivas-university

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net