

ಚಂಪಕ ಸಂಸ್ಥೆಯು ‘ಚಂಪಕ ರಾಷ್ಟ್ರೀಯ ಕಲಾ ಉತ್ಸವ’ವನ್ನು ಸೆ.2ರಂದು ಸಂಜೆ 4.30ಕ್ಕೆ ರಾಮಕೃಷ್ಣನಗರದ ಚಂಪಕ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದೆ.
ಮೊದಲಿಗೆ ವಿದುಷಿ ನಾಗಲಕ್ಷ್ಮಿ ನಾಗರಾಜನ್ ನೃತ್ಯ ಪ್ರದರ್ಶಿಸಲಿದ್ದಾರೆ. ಇವರಿಗೆ ವಿದುಷಿ ಚೇತನ ನಾಗರಾಜ್(ಸಂಗೀತ ಸಂಯೋಜನೆ), ವಿದುಷಿ ಶ್ರುತಿ ಪ್ರಸಾದ್( ಗಾಯನ), ಪ್ರಣವ್(ಕೊಳಲು), ವಿದ್ವಾನ್ ವಿಕ್ರಂ ಭಾರದ್ವಾಜ್(ಮೃದಂಗ) ಸಾಥ್ ನೀಡಲಿದ್ದಾರೆ.
ಬಳಿಕ ವಿದುಷಿ ಶುಭ ಧನಂಜಯ ಮತ್ತು ಶಿಷ್ಯ ವೃಂದದಿಂದ ‘ಭರತನಾಟ್ಯ ಮತ್ತು ಕಥಕ್’ ಪ್ರದರ್ಶನ, ವಿದುಷಿ ಶ್ರೀ ಲಕ್ಷ್ಮೀಕುಮಾರ್ ಅವರ ಶಿಷ್ಯ ವೃಂದದಿಂದ ‘ಭರತನಾಟ್ಯ’ ಪ್ರದರ್ಶನ ಇರಲಿದೆ.