ಚಂಪಕ ರಾಷ್ಟ್ರೀಯ ಕಲಾ ಉತ್ಸವ

Drama 6x4
Published on

ಭಾರತೀಯ ಪ್ರದರ್ಶಕ ಕಲೆಗಳ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಚಂಪಕ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ‘ಚಂಪಕ ರಾಷ್ಟ್ರೀಯ ಕಲಾ ಉತ್ಸವ’ ಶೀರ್ಷಿಕೆಯಡಿ ಮಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಭಾಗವಾಗಿ ರಾಮಕೃಷ್ಣನಗರದ ಚಂಪಕ ಅಕಾಡೆಮಿ ಸಭಾಂಗಣದಲ್ಲಿ ಆಗಸ್ಟ್ 5 ರಂದು ಸಂಜೆ 4.30ಕ್ಕೆ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿದೆ.


ಕಲಾಶ್ರೀ ಡಾ.ತುಳಸಿ ರಾಮಚಂದ್ರ ಅವರ ಶಿಷ್ಯ ವೃಂದ ‘ಮಾಧುರ್ಯ ಮಾರ್ಗ’ ಎಂಬ ಶೀರ್ಷಿಕೆಯಲ್ಲಿ ಕರ್ನಾಟಕದ ನೃತ್ಯ ಪರಂಪರೆ ಪ್ರತಿಬಿಂಬಿಸುವ ಕಾರ್ಯಕ್ರಮ ನೀಡಲಿದ್ದಾರೆ.

ಬಳಿಕ ಬೆಂಗಳೂರಿನ ಲಾಸ್ಯವರ್ಧನ ಲಲಿತಕಲಾ ಸಂಸ್ಥೆಯ ಸಂಸ್ಥಾಪಕಿ ಡಾ.ಮಾಲಿನಿ ರವಿಶಂಕರ್ ಅವರ ಮಗಳು ಹಾಗೂ ಶಿಷ್ಯೆ ಲಾಸ್ಯ ಪ್ರಿಯಾ ‘ಸಂಗೀತ ಗಾನ ನೃತ್ಯ ಯಾನ’ ಶೀರ್ಷಿಕೆಯ ಪ್ರದರ್ಶನ ನೀಡಲಿದ್ದಾರೆ. ಅವರಿಗೆ ಪ್ರವರ್ಧನ್(ಸಂಗೀತ), ಕೇಶವ ಪ್ರಸಾದ್(ವಯೋಲಿನ್) ಹಾಗೂ ಕಾರ್ತಿಕ್ ಪ್ರಣವ್(ಮೃದಂಗ) ಸಹಕಾರ ನೀಡಲಿದ್ದಾರೆ. ಚಂಪಕ ಅಕಾಡೆಮಿಯ ಸಂಸ್ಥಾಪಕಿ ವಿದುಷಿ ನಾಗಲಕ್ಷ್ಮೀ ನಾಗರಾಜನ್ ಅವರ ಕಿರಿಯ ಶಿಷ್ಯ ವೃಂದ ಕೂಡ ಪ್ರದರ್ಶನ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net