‘ಚಂಪಾ ಸಿರಿಗನ್ನಡ ಪ್ರಶಸ್ತಿ’ಗೆ ಪ್ರೊ. ಬೆಟ್ಟದೂರು ಆಯ್ಕೆ

New Project (16)
Published on

ಬೆಂಗಳೂರು: ಕವಿ, ಹೋರಾಟಗಾರ ದಿ. ಪ್ರೊ. ಚಂದ್ರಶೇಖರ ಪಾಟೀಲರು ಸ್ಥಾಪಿಸಿರುವ ಕರ್ನಾಟಕ ಸ್ವಾಭಿಮಾನಿ ವೇದಿಕೆ ನೀಡಲಿರುವ ಪ್ರಸಕ್ತ ಸಾಲಿನ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ಗೆ ಬಂಡಾಯ ಸಾಹಿತಿ ಕೊಪ್ಪಳದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಕಂಚಿನ ಫಲಕವನ್ನು ಒಳಗೊಂಡಿದೆ. ಜೂ. 20ರಂದು ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಲೇಖಕ ಡಾ. ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವಿದ್ವಾಂಸ ಪ್ರೊ. ಹಂಪಾ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ಚಂಪಾ ಪುತ್ರಿ ಮೀನಾ ಪಾಟೀಲ್ ಇತರರು ಭಾಗವಹಿಸಲಿದ್ದಾರೆ ಎಂದು ವೇದಿಕೆ ಆಧ್ಯಕ್ಷ ಶಂಕರ್ ಹೂಗಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net