

ವಿಜಯವಾಣಿ ಸುದ್ದಿಜಾಲ ಗದಗ
ಮಹಿಳಾ ಉದ್ಯಮಿಗಳಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿ ತರುವ ಮೂಲಕ ಸಬ್ಸಿಡಿ ನೀಡುತ್ತಿದೆ. ಮಹಿಳಾ ಉದ್ಯಮಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಯಶಸ್ವಿ ಉದ್ಯಮಿಯಾಗಬೇಕು ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹರಿಜನ ಹೇಳಿದರು.
ಚೇಂರ್ಬಸ್ ಕಾಮರ್ಸ್ನಲ್ಲಿ ಶುಕ್ರವಾರ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮ ಯದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿ. ಕೃಷಿ ಪ್ರಧಾನ್ಯ ದೇಶವಾದರೂ ಕೃಷಿ ಜತೆಗೆ ಉದ್ಯಮ ಸ್ಥಾಪನೆ ಮಾಡುವುದು ಅತೀ ಅವಶ್ಯವಾಗಿದೆ. ಕೈಗಾರಿಕೆ ಎಂದರೆ ಕೇವಲ ರೂಪಾಂತರ ಅಲ್ಲ. ಕೈಗಾರಿಕೆ ಸ್ಥಾಪನೆ ಮಾಡಬೇಕೆಂದರೆ ಸಂಪೂರ್ಣ ಜ್ಞಾನ ಪಡೆಯುವುದು ಅತೀ ಅವಶ್ಯ ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಮಾತನಾಡಿ, ರಾಜ್ಯದಲ್ಲಿ 14 ಆಕಾಡೆಮಿಗಳು, 4 ಪ್ರಾಧಿಕಾರ ಮತ್ತು 31 ಜಿಲ್ಲಾ ಕಚೇರಿಯನ್ನು ಇಲಾಖೆ ಹೊಂದಿದೆ. ಮಹಿಳೆಯರಿಗೆ ಹೆಚ್ಚಿನ ಪ್ರಾಧ್ಯಾನತೆ ಇದೆ. ಸಂಗೀತ ಸಾಹಿತ್ಯ ಮತ್ತು ಪುಸ್ತಕ ಪ್ರಾಧಿಕಾರದಲ್ಲಿ ಮಹಿಳೆಯರಿಗೆ ಆಧ್ಯತೆ ನೀಡಲಾಗಿದೆ ಎಂದರು.
ರೇಣುಕಾ ಅಮಾತ್ಯ, ಜಯಶ್ರಿ ತಾತನಗೌಡ, ಶರಣು ಗದಗ, ಸುವರ್ಣಾ ಮದರಿಮಠ, ಜ್ಯೋತಿ ದಾನಪ್ಪಗೌಡ್ರ ಇತರರು ಇದ್ದರು.