ರಥಬೀದಿಯಲ್ಲಿ ಲಾರಿ ಸಂಚಾರ ನಿಷೇಧಕ್ಕೆ ಮನವಿ

chamber
Published on

ಕುಶಾಲನಗರ:

ಕುಶಾಲನಗರ ರಥ ಬೀದಿಯಲ್ಲಿ ಲಾರಿ ಸಂಚಾರದಿAದ ಹಲವು ಬಾರಿ ಟ್ರಾಫಿಕ್ ಜಾಮ್ ಆಗಿರುವುದರಿಂದ ಆ ರಸ್ತೆಯಲ್ಲಿ ಎಲ್ಲ ಮಾದರಿಯ ಲಾರಿ ಸಂಚಾರದಿAದ ಮುಕ್ತಗೊಳಿಸಲು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಕುಶಾಲನಗರದ ಡಿವೈಎಸ್ಪಿ ಚಂದ್ರಶೇಖರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಕುಶಾಲನಗರ ಚೇಂಬರ್ ಅಧ್ಯಕ್ಷ ಕೆ.ಎಸ್. ನಾಗೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಸಂಚಾರ ನಿಯಮಗಳನ್ನು ತಿಳಿಸುವ ನಾಮ ಫಲಕವನ್ನು ಅವಶ್ಯವಿರುವ ಕಡೆಗಳಲ್ಲಿ ಅಳವಡಿಸಲು ಸಲಹೆ ಕೊಡಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಚಂದ್ರಶೇಖರ್ ವರ್ತಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ನಾಮಫಲಕ ಅಳವಡಿಸಲು ನಮ್ಮದೇ ಆದ ನಿಯಮಗಳು ಇವೆ. ಅದರಂತೆ ಬೋರ್ಡ್ ಗಳನ್ನು ಮಾಡಿಸಲು ದಾನಿಗಳು ಮುಂದಾದರೆ ಖಂಡಿತ ಮಾಡೋಣ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕುಶಾಲನಗರ ಸ್ಥಾನೀಯ ಸಮಿತಿಯ ಉಪಾಧ್ಯಕ್ಷ ಎಂ.ಡಿ. ರಂಗಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ರವೀಂದ್ರ. ವಿ. ರೈ, ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ. ಬಾಬು, ನಿರ್ದೇಶಕರಾದ ಕೆ.ಜೆ. ಸತೀಶ್, ಅಬ್ದುಲ್ ರಶೀದ್, ಬಿ.ಎನ್.ಅಂಜನ್, ಜನಾರ್ದನ ಪ್ರಭು, ಕುಶಾಲನಗರ ಠಾಣಾಧಿಕಾರಿ ಗಣೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net