ಆರೋಗ್ಯ ಶಿಬಿರಗಳು ಗ್ರಾಮೀಣ ಜನರಿಗೆ ಅನುಕೂಲ

19rajesh5
Published on

ಚಾಮರಾಜನಗರ: ಕಣ್ಣಿನ ಉಚಿತ ತಪಾಸಣಾ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸುವುದು ಅತ್ಯಂತ ಸಹಕಾರಿಯಾಗಿದೆ ಎಂದು ರೈತ ಮುಖಂಡ ಎ.ಎಂ.ಚನ್ನಂಜಪ್ಪ ತಿಳಿಸಿದರು.

ತಾಲೂಕಿನ ಆಲೂರು ಗ್ರಾಮದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಸಹಯೋಗದಲ್ಲಿ ಹಿರಿಯ ಪತ್ರಕರ್ತ ದಿ.ಎ.ವಿ.ನಾಗರಾಜುರವರ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯ ಪತ್ರಕರ್ತ ಎ.ವಿ.ನಾಗರಾಜು ಅವರ ಸಮಾಜಮುಖಿ ಚಿಂತನೆಗಳು ಹಾಗೂ ಪರೋಪಕಾರಿ ಮನೋಭಾವ ನಮ್ಮೆಲ್ಲರಿಗೂ ಆದರ್ಶವಾಗಬೇಕು. ಇಂತಹ ಶಿಬಿರಗಳು ಗ್ರಾಮಾಂತರ ಜನರಿಗೆ ತುಂಬ ಅನುಕೂಲವಾಗಿದೆ. ನಾನು ಸಹ ನನ್ನ ಮರಣನಂತರ ಕಣ್ಣುಗಳನ್ನು ದಾನ ಮಾಡುತ್ತೇನೆ ಎಂದು ತಿಳಿಸಿದರು.

ಕಣ್ಣಿನ ಉಚಿತ ತಪಾಸಣೆಗೆ ನೂರಾರು ಜನರು ಭಾಗವಹಿಸಿದ್ದರು, ಅದರಲ್ಲಿ ಕಣ್ಣಿನ ಪೊರೆ ಶಸಚಿಕಿತ್ಸೆಗೆ ಆಯ್ಕೆಯಾದ 15 ಜನರನ್ನು ಕರೆದೊಯ್ಯಲಾಯಿತು. ಕಾರ್ಯಕ್ರಮದಲ್ಲಿ ಆಲೂರು ನಾಗೇಂದ್ರಮೂರ್ತಿ, ರೈತ ಮುಖಂಡ ಪರಶಿವಪ್ಪ, ಕೋಟಂಬಳ್ಳಿ ಸಿದ್ದರಾಜು, ಆಲೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net