ವಿದ್ಯುತ್ ತಗುಲಿ ಓರ್ವಮೃತ

Crime Logo
Published on

ಚಾಮರಾಜನಗರ: ದನ ಮೇಯಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಗ್ರೌಂಡಿಂಗ್ ಆಗಿ ಓರ್ವ ಮೃತಪಟ್ಟಿದ್ದಾನೆ. ತಾಲೂಕಿನ ಕೋಡಿಮೋಳೆ ಬಸವನಪುರ ಗ್ರಾಮದ ನಿವಾಸಿ ಮಾದಪ್ಪ (70) ಮೃತ. ಈತ ಮಂಗಳವಾರ ದನ ಮೇಯಿಸಲು ಹೋಗಿದ್ದಾಗ ಗ್ರಾಮ ಪಂಚಾಯಿತಿಯ ತೊಂಬೆ ಸಮೀಪ ಮಳೆಯಿಂದಾಗಿ ವಿದ್ಯುತ್ ಗ್ರೌಂಡಿಂಗ್ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net