ಭಾರತಕ್ಕೆ ಸ್ವಾತಂತ್ರ್ಯ ಸುಲಭಕ್ಕೆ ದೊರೆತಿಲ್ಲ

15chn7
Published on

ಚಾಮರಾಜನಗರ : ಅನೇಕ ದೇಶಭಕ್ತರ ತ್ಯಾಗ, ಬಲಿದಾನ ಹಾಗೂ ಒಗ್ಗಟ್ಟಿನ ಬಲದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್,ಗಂಗಾಧರ್ ಹೇಳಿದರು.

ನಗರದ ಹೊರವಲಯದಲ್ಲಿರುವ ಚಾ.ನಗರ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಈ ಮೂಲಕ ದೇಶದೋದ್ಧಾರಕ್ಕಾಗಿ, ರಾಷ್ಟ್ರೋತ್ಥಾನಕ್ಕಾಗಿ ಭಾರತದ ಪ್ರತೀ ನಾಗರಿಕರು ತೊಡಗಿಸಿಕೊಳ್ಳಬೇಕು. ದೇಶದ ಸರ್ವತೋಮುಖ ಪ್ರಗತಿಗೆ ಇಂದಿನ ಯುವ ಜನತೆ ನಿರಂತರವಾಗಿ ಶ್ರಮಿಸಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಪಿ ಮಾದೇಶ್, ಪಿ.ಎಂ.ಇ.ಬಿ ನಿರ್ದೇಶಕ ಡಾ.ಸಿದ್ಧರಾಜು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net