ಶೀಲ ಶಂಕಿಸಿ ಹೆಂಡತಿಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

Published on

ಚಾಮರಾಜನಗರ : ಪ್ರೀತಿಸಿ ಮದುವೆಯಾಗಿ ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ ಗಂಡನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ಆದೇಶ ಹೊರಡಿಸಿದೆ.

ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ರಾಜಶೇಖರ್‌ಮೂರ್ತಿ ಶಿಕ್ಷೆಗೊಳಗಾದವನು. ಈತ ಭಾಗ್ಯ ಎನ್ನುವ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದು, 3 ವರ್ಷಗಳ ಕಾಲ ಚೆನ್ನಾಗಿ ಜೀವನ ಸಾಗಿಸುತ್ತಿದ್ದರು. ನಂತರದ ದಿನಗಳಲ್ಲಿ ಭಾಗ್ಯಾಳ ಶೀಲದ ಮೇಲೆ ಅನುಮಾನಗೊಂಡು ಆಗಾಗ ಗಲಾಟೆ ಮಾಡುತ್ತಿದ್ದನು. ಈ ವಿಚಾರವಾಗಿ ಗ್ರಾಮದಲ್ಲಿ ನ್ಯಾಯಾ ಪಂಚಾಯಿತಿ ಮಾಡಿದರು. ಗಂಡನ ಜಗಳ ತಾಳಲಾರದೇ ಭಾಗ್ಯ ತವರು ಮನೆಗೆ ಬಂದಿರುತ್ತಾರೆ. 2018 ರ ಅ.25ರಲ್ಲಿ ಹೆಂಡತಿಯ ಮನೆಗೆ ಬಂದ ರಾಜಶೇಖರ್‌ಮೂರ್ತಿ ಕುಡುಗೋಲು ಮತ್ತು ಕತ್ತರಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಎಸ್.ಭಾರತಿ ಶೇಖರ್‌ಗೆ ಜೀವಾವಧಿ ಶಿಕ್ಷೆ ಮತ್ತು 15 ಸಾವಿರ ರೂ.ದಂಡ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net