ವಿ.ಶ್ರೀನಿವಾಸ್‌ಪ್ರಸಾದ್ ನೊಂದವರ ದನಿಯಾಗಿದ್ದರು

06rajesh4
Published on

ಚಾಮರಾಜನಗರ: ಮಾಜಿ ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ಅವರು ಬಡವರು, ಹಿಂದುಳಿದವರು ಹಾಗೂ ನೊಂದವರ ದನಿಯಾಗಿದ್ದರು ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಹೇಳಿದರು.

ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಪಾರ್ವತಿ ಬಾಲಾಶ್ರಮದಲ್ಲಿ ವಿ.ಶ್ರೀನಿವಾಸ್‌ಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದರು. ಅವರು ನಮ್ಮಿಂದ ದೂರವಾಗಿದ್ದರೂ ಕೂಡ ಅವರು ಮಾಡಿರುವ ಸಾಧನೆಗಳು , ಅಭಿವೃದ್ಧಿ ಕೆಲಸಗಳು ಅವರನ್ನು ಜೀವಂತವಾಗಿರಿಸಿವೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ, ಚಿಕ್ಕಮಹದೇವು, ಸಿ.ಕೆ.ಮಂಜುನಾಥ್, ಕೆ.ಎಂ.ನಾಗರಾಜು, ಬಸವನಪುರ ರಾಜಶೇಖರ, ರಾಮಸಮುದ್ರ ಪ್ರಸನ್ನ, ಗಣೇಶಪ್ರಸಾದ್, ಸಿ.ಎಂ.ನರಸಿಂಹಮೂರ್ತಿ, ಎಂ.ಶಿವಮೂರ್ತಿ, ಬಸವಣ್ಣ ಪು.ಶ್ರೀನಿವಾಸನಾಯಕ, ನಾಗಬಸವಣ್ಣ, ಯ.ಮಹದೇವಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net