ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಆಯ್ಕೆ

04chn5
Published on

ಚಾಮರಾಜನಗರ: ಜಿಲ್ಲಾ ಸಹಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ರಾಯಪ್ಪನ್ ಅವಿರೋಧವಾಗಿ ಆಯ್ಕೆಯಾದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಂಜುಂಡಪ್ರಸಾದ್, ಉಪಾಧ್ಯಕ್ಷ ಸ್ಥಾನಕ್ಕೆ ರಾಯಪ್ಪನ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ದಯಾನಂದ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಒಕ್ಕೂಟದ ನಿರ್ದೇಶಕ ಎಚ್.ಎಂ.ಮಹದೇವಪ್ರಭು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಎಂ.ಎಂ. ನಾಗರಾಜು, ಅಮಚವಾಡಿ ನಾಗಸುಂದರ್, ಜಿ. ಮಡಿವಾಳಪ್ಪ, ಎಚ್.ಎನ್. ಸುಂದರರಾಜ್, ಎಂ.ಎಂ. ಪ್ರಭುಸ್ವಾಮಿ, ಮುದ್ದಯ್ಯ, ಎಂ.ರವಿ, ಪಿ.ಮಹದೇವಸ್ವಾಮಿ, ದಾಕ್ಷಾಯಿಣಿ, ಜಯಶೀಲಾ, ಸಹಾಯಕ ಚುನಾವಣಾಧಿಕಾರಿ ಸುರೇಶ್, ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ನಾಯಕ್, ಮ್ಯಾನೇಜರ್ ಮಲ್ಲಿಕಾರ್ಜುನಸ್ವಾಮಿ, ಮಲ್ಲೇಶಪ್ಪ, ಕೆಂಡಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net