ಹೂಗಳಲ್ಲಿ ಮೂಡಿದ ಗೋಪಾಲಸ್ವಾಮಿ

07rajesh11
Published on

ಚಾಮರಾಜನಗರ: ಸಾವಿರಾರು ಹೂಗಳಲ್ಲಿ ನಿರ್ಮಿಸಿದ್ದ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಿಮವದ್ ಗೋಪಾಲಸ್ವಾಮಿ ದೇವಾಲಯದ ಕಲಾಕೃತಿ ನೋಡುಗರ ಗಮನ ಸೆಳೆಯಿತು.

ಅದಲ್ಲದೇ ಹೂಗಳಿಂದ ಮೂಡಿದ್ದ ಏಳು ಎಡೆಯ ಸರ್ಪ, ಆನೆ, ಜಿಂಕೆ, ಕೋಗಿಲೆ ಹಾಗೂ ವಿವಿಧ ಸಂಗೀತ ಪರಿಕರಗಳು ಆಕರ್ಷಕವಾಗಿತ್ತು. ಕಲ್ಲಂಗಡಿ ಹಣ್ಣಿನಲ್ಲಿ ಮೂಡಿದ್ದ ಗಣೇಶನ ಮೂರ್ತಿ, ಡಾ.ರಾಜ್ ಕುಮಾರ್, ಪುನೀತ್, ಸಿದ್ದರಾಮಯ್ಯ, ಬಿ.ರಾಚಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಪುಟ್ಟರಂಗಶೆಟ್ಟಿ, ಸಂಸದ ಸುನೀಲ್ ಬೋಸ್ ಭಾವಚಿತ್ರಗಳು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಭಾವಚಿತ್ರಗಳು ಎಲ್ಲರ ಗಮನ ಸೆಳೆಯಿತು.

ಅದಲ್ಲದೇ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ನೀಡುವ ಕಲಾಕೃತಿಗಳನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಣೆ ಮಾಡಿದರು. ಸಾವಯವ ಕೃಷಿಯಲ್ಲಿ ರೈತರು ಬೆಳೆದ ಬೆಳೆಗಳನ್ನು ಪ್ರದರ್ಶನಕ್ಕೆ ಹಿಡಲಾಗಿತ್ತು. ಮರಳಿನಲ್ಲಿ ಮೂಡಿದ್ದ ನೇಗಿಲಯೋಗಿ ಕಲಾಕೃತಿಯೂ ಗಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net