ಯೋಗಕ್ಕಿದೆ ಜಾಗತಿಕ ಮನ್ನಣೆ

15raju5
Published on

ಚಾಮರಾಜನಗರ: ಪ್ರಪಂಚದ ವಿವಿಧ ರಾಷ್ಟ್ರಗಳು ಭಾರತೀಯ ಯೋಗವನ್ನು ಒಪ್ಪಿಕೊಂಡು ಮನ್ನಣೆ ನೀಡಿವೆ. ಭಾರತದ ಮಣ್ಣಿಗೆ ಅಂತಹ ವೌಲ್ಯಯುತವಾದ ಗುಣವಿದೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ನಿಜಗುಣರಾಜು ತಿಳಿಸಿದರು.


ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಷ್ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಯೋಗಥಾನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ವ್ಯಕ್ತಿಯ ದೈಹಿಕ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ತ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಯೋಗಭ್ಯಾಸದಲ್ಲಿ ಪ್ರತಿದಿನ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯೋಗ ಭಾರತೀಯ ಪುರಾತನ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ. ಯೋಗದ ಮಹತ್ವವನ್ನು ಅರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವ ಯೋಗ ದಿನವನ್ನು ಆಚರಣೆಗೆ ತಂದಿವೆ ಎಂದರು.
ಜಿಲ್ಲಾಕಾರಿ ಡಿ.ಎಸ್. ರಮೇಶ್ ಮಾತನಾಡಿ, ಸರ್ಕಾರದ ನಿರ್ದೇಶನದನ್ವಯ ರಾಜ್ಯದ್ಯಂತ ಹಮ್ಮಿಕೊಳ್ಳಲಾಗಿರುವ ಯೋಗಥಾನ್‌ನಲ್ಲಿ ಯೋಗ ಬೋಧಕರು ಹಾಗೂ ಯೋಗಾಸಕ್ತರಿಂದ ಯೋಗಾಭ್ಯಾಸ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಆರೋಗ್ಯಕ್ಕಾಗಿ ಯೋಗ ಅಗತ್ಯವಾಗಿದೆ ಎಂದರು.


ಉಸಿರಾಡದ ಜೀವಿಗಳೂ ಎಲ್ಲೂ ಇಲ್ಲ. ಉತ್ತಮ ಉಸಿರಾಟಕ್ಕೆ ಯೋಗ ನೆರವು ನೀಡಲಿದೆ. ವ್ಯಕ್ತಿಗೆ ಸಿಟ್ಟು ಬಂದಾಗ ಉಸಿರಾಟದ ಉದ್ವೇಗವನ್ನು ನಿಯಂತ್ರಿಸಿಕೊಂಡು ದೇಹ ಮತ್ತು ಮನಸ್ಸನ್ನು ಸಮಸ್ಥಿತಿಗೆ ತರಲು ಯೋಗಾಭ್ಯಾಸ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ಯೋಗದಿಂದ ಮನಸ್ಸು ಪ್ರುಲ್ಲಗೊಳ್ಳಲಿದೆ. ಜೀವನದಲ್ಲಿ ಎದುರಾಗುವ ವೈರುಧ್ಯಗಳ ನಡುವೆ ಉತ್ತಮ ಬದುಕು ಸಾಗಿಸಲು ಯೋಗ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಯೋಗಾಥಾನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಯೋಗ ಬೋಧಕರು, ಸಂಘ-ಸಂಸ್ಥೆಗಳ ಪದಾಕಾರಿಗಳು, ಯೋಗಾಸಕ್ತರು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಯೋಗ ಪ್ರದರ್ಶನ ಮಾಡಿದರು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಟಿ.ಪಿ. ಶಿವಕುಮಾರ್, ಉಪವಿಭಾಗಾಕಾರಿ ಗೀತಾ ಹುಡೇದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್. ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಅನಿತಾ, ನಗರಸಭೆ ಪೌರಾಯುಕ್ತ ರಾಮದಾಸ್, ಆಯುಷ್ ಅಕಾರಿ ಪುನೀತ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net