

ಚಾಮರಾಜನಗರ: ಮಾಜಿ ಸಚಿವ ವಿ.ಸೋಮಣ್ಣ ಅವರ 73ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಗುರುವಾರ ವಿವಿಧ ಕಾರ್ಯಕ್ರಮಗಳು ನಡೆದವು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಇಂಚರ ಗ್ರೂಪ್ಸ್ ವತಿಯಿಂದ ಶ್ರೀ ಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು. ನಂತರ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಣ್ಣು-ಹಂಪಲು ವಿತರಿಸಿ ಆಸ್ಪತ್ರೆಯ ಮುಂಭಾಗವೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಇಂಚರ ಗ್ರೂಪ್ಸ್ ಮಾಲೀಕ ಸ್ಟೈಲ್ ಮಂಜು, ಡಾ.ಭಾರತಿ, ಡಾ.ಪ್ರದೀಪ್, ವಿ.ಸೋಮಣ್ಣ ಅಭಿಮಾನಿ ಬಳಗದ ಕೊತ್ತಲವಾಡಿ ಕುಮಾರ್, ಮಂಜೇಶ್ ಮೂಡ್ಲುಪುರ, ಶಿವುವಿರಾಟ್, ಸಿ.ಎಂ.ಕೃಷ್ಣಮೂರ್ತಿ, ಫೃಥ್ವಿ, ಬಸವರಾಜು ಕಂಠಿ, ಗುರುಕಾವುದವಾಡಿ, ರಾಕೇಶ್, ಪ್ರಸನ್ನ, ಸುವಾಸ್, ನಾಗಚೇತ್, ಶಮಿತ್, ರಾಜು ಈಶ್ವರ್ ರಕ್ಷಿತ್, ಯುವಗಿರಿ, ಬಸಪ್ಪ ರಾಜಣ್ಣ, ಗಜ, ಮಹದೇವಸ್ವಾಮಿ, ಸುಭಾಷ್ ಪಟೇಲ್, ಮುದ್ದಪ್ಪ ಭಾಗವಹಿಸಿದ್ದರು.