ಚಾಮರಾಜನಗರ: ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮಂಜೂರಾದ ಹುದ್ದೆಗಳಿಗೆ ಎದುರಾಗಿ ಮ್ಯಾಪಿಂಗ್ ಮಾಡಲಾಗಿದೆ. ಇದರಲ್ಲಿ ಹೆಚ್ಚುವರಿ ಎಂದು ಗುರುತಿಸಿರುವ ಶಿಕ್ಷಕರು ಹಾಗೂ ಶೂನ್ಯ ದಾಖಲಾತಿ ಇರುವ ಶಾಲೆಗಳಲ್ಲಿನ ಶಿಕ್ಷಕರಿಗೆ ಹೆಚ್ಚುವರಿ ತಾತ್ಕಾಲಿಕ ಪಟ್ಟಿಯನ್ನು ವರ್ಗಾವಣೆ ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ.
ಸದರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಅವಶ್ಯ ಶಾಲೆಗಳಿಗೆ ಮರುಹೊಂದಾಣಿಕೆ ಮಾಡುವ ಸಂಬಂಧ ತಾತ್ಕಾಲಿಕ ಹೆಚ್ಚುವರಿ ಶಿಕ್ಷಕರು ಆದ್ಯತೆ, ವಿನಾಯಿತಿ ಕೋರಲು ಅವಶ್ಯವೆನಿಸಿರುವ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಇ.ಇ.ಡಿ.ಎಸ್ ಎಂಪ್ಲಾಯಿ ಲಾಗಿನ್‌ನಲ್ಲಿ ಪ್ರವೇಶಿಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಡಿ.17 ಕೊನೆಯ ದಿನವಾಗಿದೆ. ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳನ್ನು ಶಿಕ್ಷಕರು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಇಂದೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.