ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ

b74a1512-3aa4-4551-aada-68c56d2eaec9
Published on

ಚಾಮರಾಜನಗರ: ಮಾಜಿ ಸಚಿವ ವಿ.ಸೋಮಣ್ಣ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಪೌರಕಾರ್ಮಿಕರಿಗೆ ಸೀರೆ, ಬಟ್ಟೆ ವಿತರಿಸಲಾಯಿತು.

ನಗರದ ಸಿಡಿಎಸ್ ಭವನದಲ್ಲಿ ವಿ.ಸೋಮಣ್ಣ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಆಶಾ ನಟರಾಜು ಮಾತನಾಡಿ, ವಿ.ಸೋಮಣ್ಣ ಅಭಿಮಾನಿಗಳಾದ ನಾವೆಲ್ಲರೂ ಸೇರಿ ಪೌರಕಾರ್ಮಿಕರಿಗೆ ಸೀರೆ, ಬಟ್ಟೆ ವಿತರಿಸುವ ಮೂಲಕ ಅವರ ಹುಟ್ಟಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ನಗರಸಭಾ ಸದಸ್ಯ ಶಿವರಾಜ್, ಎಪಿಎಂಸಿ ನಿರ್ದೇಶಕ ವೆಂಕಟರಾವ್ ಸಾಠೆ, ಮುಖಂಡ ನಟರಾಜು, ಕೊತ್ತಲವಾಡಿ ಕುಮಾರ್, ಚಂದ್ರಶೇಖರ್, ಉಡಿಗಾಲ ಮಲ್ಲಿಕಾರ್ಜುನ್, ರಾಜು, ಅಮಚವಾಡಿ ಮಹೇಂದ್ರ, ಕೆಂಪರಾಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net