ಇಂದು ಶಿವ ಧ್ವಜಾರೋಹಣ

Published on

ಚಾಮರಾಜನಗರ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶಭವನದಲ್ಲಿ ಫೆ.18 ರಂದು ಸರ್ವಧರ್ಮದವರಿಂದ ಶಿವಧ್ವಜಾರೋಹಣ ನೆರವೇರಲಿದೆ. ಅಂದು ಬೆಳಗ್ಗೆ 8 ಗಂಟೆಗೆ 87ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ, ನಳಂದ ವಿಶ್ವವಿದ್ಯಾಲಯದ ಬಂತೇ ಬೋದತ್ತ ಥೇರಾ, ಸಂತ ಪೌಲರ ದೇವಾಲಯದ ಫಾದರ್ ಅಂತೋಣಪ್ಪ, ಜೈನ ಸಂಘದ ಅಧ್ಯಕ್ಷ ನಿರ್ಮಲ್ಕುಮಾರ ಜೈನ್, ಮುಸ್ಲಿಂ ಧರ್ಮಗುರು ಫರತ್‌ಉಲ್ಲಾ ಭಾಗವಹಿಸುವರು ಎಂದು ಸಂಸ್ಥೆಯ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿಜೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net