ಛತ್ರಪತಿ ಶಿವಾಜಿ ವೀರ ಆಡಳಿತಗಾರ

23raju4
Published on

ಚಾಮರಾಜನಗರ: ಪ್ರಾಚೀನ ಭಾರತ ಧೈರ್ಯಶಾಲಿ ಮತ್ತು ವೀರ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜರ ಹಿನ್ನೆಲೆಯನ್ನು ಹೊಂದಿದೆ ಎಂದು ಮರಾಠ ಸಂಘದ ಅಧ್ಯಕ್ಷ ವೆಂಕಟರಾವ್ ಸಾಠೆ ತಿಳಿಸಿದರು.


ನಗರದ ವರನಟ ಡಾ.ರಾಜ್‌ಕುಮಾರ್ ಕಲಾ ಭವನದ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧೈರ್ಯಶಾಲಿ ಸಾಮ್ರಾಜ್ಯದ ಅಪತಿಗಳು ತಮ್ಮ ತಾಯಿನಾಡು ಮತ್ತು ಸ್ವರಾಜ್ಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಜಿಸಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು ಎಂದು ತಿಳಿಸಿದರು.


ಜಿಲ್ಲಾಡಳಿತ ಕಚೇರಿಯ ಶಿರಸ್ತೇದಾರ್ ರಂಗರಾಜು, ಹೋರಾಟಗಾರ ನಿಜಧ್ವನಿ ಗೋವಿಂದರಾಜು, ಕನ್ನಡ ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಗುರುಲಿಂಗಯ್ಯ ಮಾತನಾಡಿದರು. ಮರಾಠ ಸಂಘದ ಉಪಾಧ್ಯಕ್ಷ ಚಂದ್ರುರಾವ್, ಸದಸ್ಯರಾದ ಶ್ರೀನಿವಾಸರಾವ್, ಮಮತಾಬಾಯಿ, ಅನಿತಾಬಾಯಿ, ಪೂಜಾಬಾಯಿ, ರವಿರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net