

ಚಾಮರಾಜನಗರ: ನಗರದ ಸೇವಾಭಾರತಿ ಪದವಿ ಪೂರ್ವ ಕಾಲೇಜಿನ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಶನಿವಾರ ಆಹಾರಮೇಳ ಆಯೋಜಿಸಲಾಗಿತ್ತು.
ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ತಯಾರಿಸಿ, ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸುಮಾರು 20ಕ್ಕೂ ಹೆಚ್ಚು ಸ್ಟಾಲ್ಗಳನ್ನು ನಿರ್ಮಿಸಿ ರವೆ ಉಂಡೆ, ಜಾಮೂನು, ಮಸಾಲಪುರಿ, ಚುರುಮುರಿ, ತಂಪು ಪಾನೀಯ, ಐಸ್‌ಕ್ರೀಂ, ದೋಸೆ, ಮುಸುಕಿನ ಜೋಳ, ಕಡಲೆಕಾಯಿ, ಪಾಪ್‌ಕಾರ್ನ್ ಇತರ ತಿನಿಸು ಮಾರಾಟ ಮಾಡಿದರು.
ಪ್ರಾಂಶುಪಾಲ ಪಿ.ಬಿ.ಲೋಕೇಶ್ ಮಾತನಾಡಿ, ಸೇವಾಭಾರತಿ ಪದವಿ ಪೂರ್ವ ಕಾಲೇಜಿಗೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಅದರ ಜತೆಗೆ ಆಹಾರ ಮೇಳ ಸಹ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಸ್ವತಃ ತಾವೇ ತಿನಿಸುಗಳನ್ನು ತಯಾರಿದ್ದು, ವಿದ್ಯಾಭ್ಯಾಸದೊಂದಿಗೆ, ವ್ಯವಹಾರ ಜ್ಞಾನದ ಕೌಶಲವನ್ನು ಸಹ ಬೆಳೆಸಿಕೊಳ್ಳಬೇಕು ಎಂಬುದು ಮೇಳದ ಆಶಯವಾಗಿದೆ ಎಂದು ತಿಳಿಸಿದರು. ಸೇವಾಭಾರತಿ ಸಂಸ್ಥೆಯ ಆಡಳಿತಾಧಿಕಾರಿ ವಾಸುದೇವರಾವ್ ಹಾಗೂ ಅವರ ಪತ್ನಿ ಲಕ್ಷ್ಮೀ ವಾಸದೇವರಾವ್, ಪ್ರಾಧ್ಯಾಪಕರಾದ ದೀಪಾ, ಮೋಹನ್, ಬೆಳ್ಳಪ್ಪ, ಗುರುಪ್ರಸಾದ್, ಚೈತನ್ಯಾ, ಮುದ್ದು ಮಾದಪ್ಪ, ರಾಜೇಶ್ವರಿ, ರಾಜೇಂದ್ರಪ್ರಸಾದ್, ಪಂಕಜಾ, ನಂಜುಂಡಸ್ವಾಮಿ ಸೇರಿದಂತೆ ಇತರರಿದ್ದರು.