ಬಾರ್ ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

20raju7
Published on

ಸಂತೇಮರಹಳ್ಳಿ: ಅನಧಿಕೃತ ಬಾರ್ ತೆರವುಗೊಳಿಸುವಂತೆ ಒತ್ತಾಯಿಸಿ ಜನ ಹಿತಾಸಕ್ತಿ ಹೋರಾಟ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಸಂತೇಮರಹಳ್ಳಿಯ ಗ್ರಾಪಂ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಮಾತನಾಡಿ, ಸಂತೇಮರಹಳ್ಳಿ ಹಾಗೂ ತಿ.ನರಸೀಪುರ ರಸ್ತೆಯಲ್ಲಿ ಅನಧಿಕೃತವಾಗಿ ಬಾರ್ ತೆರೆಯಲಾಗಿದೆ. ಇದರಿಂದ ಸಾರ್ವಜನಿಕರಿಗೆ ದಿನನಿತ್ಯವೂ ತೊಂದರೆಯಾಗುತ್ತಿದೆ. ಬಾರ್ ಸಮೀಪವೇ ಪಿಯುಸಿ ಕಾಲೇಜು, ಹಾಸ್ಟೆಲ್, ಪ್ರೌಢಶಾಲೆ ಇದ್ದು ವಿದ್ಯಾರ್ಥಿಗಳಿಗೂ ಇದರಿಂದ ತೊಂದರೆಯಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಶಾಲಾ, ಕಾಲೇಜು ಹತ್ತಿರವಿದ್ದರೂ ಬಾರ್‌ಗೆ ಎನ್‌ಒಸಿ ಕೊಡಲು ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಮುಂದಾಗಿರುವುದು ವಿಪರ್ಯಾಸ. ಯಾವುದೇ ಕಾರಣಕ್ಕೂ ಗ್ರಾಪಂ ವತಿಯಿಂದ ಎನ್‌ಒಸಿ ಕೊಡಬಾರದು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಾರ್ ಅನ್ನು ಕೂಡಲೇ ತೆರವುಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಸಂಸ ಸಂಚಾಲಕ ಯರಿಯೂರು ರಾಜಣ್ಣ, ಹೆಗ್ಗವಾಡಿಪುರ ಮಾದೇಶ್, ಗ್ರಾಪಂ ಸದಸ್ಯ ಶಿವು, ಮುಖಂಡ ಶಿವಕುಮಾರ್, ಚಂದ್ರಶೇಖರ್, ಸುಂದರಮ್ಮ, ಮಹದೇವಮ್ಮ, ಜಯಮ್ಮ, ರತ್ನಮ್ಮ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net