ಅಮುಲ್ ವಿಲೀನ ಸಲ್ಲದು

09raju21
Published on

ಚಾಮರಾಜನಗರ: ನಂದಿನಿ ಹಾಲಿನೊಂದಿಗೆ ಅಮುಲ್ ಹಾಲನ್ನು ವಿಲೀನ ಮಾಡಬಾರದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರಿ ಉದ್ಯಾನವನದ ಆವರಣದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕ ನಂದಿನಿ ಹಾಲು ಮತ್ತು ಉತ್ಪನ್ನಗಳು ಕನ್ನಡಿಗರ ಅಸ್ಮಿತೆ, ಸ್ವಾಭಿಮಾನವಾಗಿದೆ ಈ ನಂದಿನಿ ಹಾಲಿನ ಉತ್ಪನ್ನಗಳು ಮೇಲೆ ರಾಜ್ಯದಲ್ಲಿ ಲಕ್ಷಾಂತರ ರೈತರು, ಅವರು ಕುಟುಂಬ ಅವಲಂಬಿತರಾಗಿದ್ದಾರೆ. ನಂದಿನಿಯನ್ನು ಗುಜರಾತಿನ ಅಮುಲ್‌ನೊಂದಿಗೆ ವಿಲೀನ ಲಕ್ಷಾಂತರ ಜನರು ಬೀದಿಪಾಲಾಗುತ್ತಾರೆ. ಆದರಿಂದ ಯಾವುದೇ ಕಾರಣಕ್ಕೂ ಅಮುಲ್‌ನೊಂದಿಗೆ ವಿಲೀನ ಮಾಡಬಾರದು. ಒಂದು ವೇಳೆ ಮಾಡಿದರೆ ಚುನಾವಣೆ ನಂತರ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಾ.ಮುರಳಿ, ಚಾ.ವೆಂ.ರಾಜ್‌ಗೋಪಾಲ್, ಪಣ್ಯದಹುಂಡಿ ರಾಜು, ಚಾ .ರಾ. ಕುಮಾರ್, ಗು. ಪುರುಷೋತ್ತಮ್, ಮೂರ್ತಿ, ಶಿವರುದ್ರಸ್ವಾಮಿ, ಬಸವಣ್ಣ, ನಂಜಅಡಸ್ವಾಮಿ, ರವಿಚಂದ್ರಪ್ರಸಾದ್‌ಕಹಳೆ, ಅಭಿಷೇಕ್, ಸಂಜಯ್, ಶಿವಣ್ಣ, ತಾಂಡವಮೂರ್ತಿ, ಶಿವು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net