ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪ್ರತಿಭಟನೆ

21raju3
Published on

ಚಾಮರಾಜನಗರ: ಬಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ ಬಿ.ಖಂಡ್ರೆಯವರ ಬಗ್ಗೆ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಲಘುವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.


ನಗರದ ಜಿಲ್ಲಾಡಳಿತ ಭವನದ ಮುಖ್ಯಗೇಟ್ ಮುಂಭಾಗದಿಂದ ಮಹಾಸಭಾದ ಜಿಲ್ಲಾ ನಿರ್ದೇಶಕ ಕಂಠಿ ಬಸವರಾಜು ನೇತೃತ್ವದಲ್ಲಿ ಸಮಾವೇಶಗೊಂಡು ಅಲ್ಲಿಂದ ಮೆರವಣೆಗೆ ಹೊರಟು ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲ ಕಾಲ ಪ್ರತಿಭಟನೆ ನಡೆಸಿ, ಸ್ವೀಕರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಮಹಾಸಭಾದ ಜಿಲ್ಲಾ ನಿರ್ದೇಶಕ ಕಂಠಿ ಬಸವರಾಜು ಮಾತನಾಡಿ, ಕಾಗೇರಿ ಅವರು ಸಭಾಧ್ಯಕ್ಷ ಸ್ಥಾನಕ್ಕೆ ತಕ್ಕಂತೆ ನಡೆದುಗೊಂಡಿಲ್ಲ. ಯಾವುದೋ ದುರುದ್ದೇಶವನ್ನಿಟ್ಟುಕೊಂಡು ಸಭಾಧ್ಯಕ್ಷರು ವರ್ತಿಸಿರುವುದನ್ನು ಯಾರೂ ಸಹ ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿಧಾನಸಭಾ ಚುನಾವಣೆ ಹತ್ತಿರ ಇರುವ ಈ ಸಂದರ್ಭದಲ್ಲಿ ಈ ರೀತಿ ಒಬ್ಬ ಜನನಾಯಕರಿಗೆ ಅವಮಾನ ಮಾಡಿರುವದನ್ನು ಪ್ರಜ್ಞಾವಂತ ಸಮಾಜವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಒಂದು ಪಕ್ಷದ ವಕ್ತಾರರಂತೆ ವರ್ತಿಸಿರುವುದು ಅಕ್ಷಮ್ಯ ಅಪರಾಧ. ಸಭಾಧ್ಯಕ್ಷ ಸ್ಥಾನದ ಘನತೆ ಗೌರವಗಳಿಗೆ ಧಕ್ಕೆ ತಂದಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಕ್ಷಣವೇ ಸಭಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸದನದಲ್ಲಿ ಈಶ್ವರ ಖಂಡ್ರೆ ವಿರುದ್ದ ಲಘುವಾಗಿ ಮಾತನಾಡಿರುವ ಈಶ್ವರ ಬಿ. ಖಂಡ್ರೆಯವರು ಕೂಡಲೇ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಇಂತಹ ಘಟನೆಗಳು ಮರುಕಲಿಸಬಾರದು ಎಂದು ಎಚ್ಚರಿದ್ದಾರೆ. ಸ್ಥಾನಿಕ ಶಿರಸ್ತೇದಾರರಾದ ಧನಷ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ನಟೇಶ್, ಪ್ರಧಾನ ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಕಾರ್ಯದರ್ಶಿ ಗುರುಸ್ವಾಮಿ, ಯುವ ಘಟಕ ಗಿರೀಶ್, ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಹಿರೇಬೇಗೂರು ಗುರುಸ್ವಾಮಿ, ಹರವೆ ಮಂಜು, ರೇಣುಕಪ್ಪ, ಬಂಡಳ್ಳಿ ಶಿವಕುಮಾರ್, ಅಧ್ಯಕ್ಷ ಮುಖಂಡರಾದ ಬಿ.ಕೆ.ರವಿಕುಮಾರ್, ಡಿ.ಪಿ.ಪ್ರಕಾಶ್, ಕಾವುದವಾಡಿ ಗುರು, ದೊಡ್ಡರಾಯಪೇಟೆ ಗಿರೀಶ್, ಡಾ.ಪರಮೇಶ್ವರಪ್ಪ, ಗಣೇಶ್, ಮಹದೇವಪ್ಪ, ಮುಕ್ಕಡಹಳ್ಳಿ ಮಂಜು, ಹರವೆ ಮಂಜು, ಅರಕಲವಾಡಿ ಗುರುಸ್ವಾಮಿ, ರವಿ, ಪ್ರಕಾಶ್ , ಉದಯಕುಮಾರ್, ಚನ್ನ, ಮಹೇಶ್, ಮಂಜುನಾಥ್, ಮಧು, ಸಂತೋಷ್, ಮುತ್ತಿಗೆ ಮೂರ್ತಿ, ಸಿದ್ದರಾಜು, ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net