ಅನಕೃತ ಫ್ಲೆಕ್ಸ್‌ ತೆರವಿಗೆ ಒತ್ತಾಯ

05raju2
Published on


ಚಾಮರಾಜನಗರ: ನಗರದಲ್ಲಿ ಅನಕೃತ ಫ್ಲೆಕ್ಸ್‌ಗಳನ್ನು ಅಳವಡಿಸಬಾರದೆಂದು ಒತ್ತಾಯಿಸಿ ಎಸ್‌ಡಿಪಿಐ ಪಕ್ಷದ ಸದಸ್ಯರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ನಗರಸಭೆ ಸದಸ್ಯರಾದ ಮಹೇಶ್ ಗಾಳೀಪುರ, ಅಬ್ರಾರ್ ಅಹಮ್ಮದ್, ಕಲೀಲ್ವುಲ್ಲಾ, ಮೊಹಮ್ಮದ್‌ಅಮೀಕ್ ತಮ್ಮ ಮಕ್ಕಳೊಂದಿಗೆ ಭಿತ್ತಿಪತ್ರ ಪ್ರದರ್ಶನ ಮಾಡಿ ಧರಣಿ ನಡೆಸಿದರು.
ಈ ವೇಳೆ ಅಬ್ರಾರ್ ಅಹಮ್ಮದ್ ಮಾತನಾಡಿ, ಡಿವೈಡರ್ ಮೇಲೆ ಅನಕೃತ ಫ್ಲೆಕ್ಸ್‌ಗಳನ್ನು ಅಳವಡಿಸಬಾರದು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೇ ಜಿಲ್ಲಾ ಕಾನೂನು ಪ್ರಾಕಾರ ಸಹ ಈ ನಿರ್ದಿಷ್ಟ ಸ್ಥಳದಲ್ಲಿ ಫ್ಲೆಕ್ಸ್ ಹಾಕದಿರುವಂತೆ ನಗರಸಭೆ ಪೌರಾಯುಕ್ತರಿಗೆ ಲಿಖಿತ ಪತ್ರ ನೀಡಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.

ಹೀಗಿದ್ದರೂ ಸಹ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೋರಿ ಅನಕೃತ ್ಲೆಕ್ಸ್‌ಗಳನ್ನು ಹಾಕಲಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದಿರುವ ಪೌರಾಯುಕ್ತರ ನಡೆ ಅತ್ಯಂತ ಖಂಡನೀಯ. ತಕ್ಷಣ ಪೌರಾಯುಕ್ತರು ಎಚ್ಚೆತ್ತು ಕೊಂಡು ಈ ಸಂಬಂಧ ಕ್ರಮ ಜರುಗಿಸಿ ಎಲ್ಲ ಫೆಕ್ಸ್‌ಗಳನ್ನು ತೆರವುಗೊಳಿಸ ಬೇಕು. ಇಲ್ಲದಿದ್ದರೆ ಸೋಮವಾರ ಪೌರಾಯುಕ್ತರ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net