ಹೆಣ್ಣು ಮಕ್ಕಳು ಸ್ವಯಂ ಆತ್ಮರಕ್ಷಣೆಗೆ ಸಿದ್ಧರಾಗಿ

15rajesh3
Published on

ಚಾಮರಾಜನಗರ: ಈ ಆಧುನಿಕ ಸಮಾಜದಲ್ಲೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಮಹಿಳೆಯರು ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಸಲಹೆ ನೀಡಿದರು.

ತಾಲೂಕಿನ ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನ, ಉಡಿಗೆ, ತೊಡಿಗೆ, ಊಟ, ಉಪಹಾರ ಸೇರಿದಂತೆ ಎಲ್ಲದರಲ್ಲೂ ಬದಲಾವಣೆ ಕಾಣುತ್ತಿದ್ದೇವೆ. ಪ್ರತಿಯೊಂದರಲ್ಲೂ ಆಧುನಿಕತೆ ನಮ್ಮನ್ನು ಆವರಿಸಿಕೊಂಡಿದೆ. ಆದರೂ ಹೆಣ್ಣು ಮಕ್ಕಳನ್ನು ನೋಡುವ ದೃಷ್ಠಿಕೋನ ಮಾತ್ರ ಬದಲಾಗುತ್ತಿಲ್ಲ ಇದರ ಬದಲಾವಣೆ ಮತ್ತು ಮಹಿಳೆಯರ ಶಿಕ್ಷಣ, ಸುರಕ್ಷತೆ ಕುರಿತು ಅರಿವು ಮೂಡಿಸಬೇಕಾಗಿದೆ ಎಂದರು.

ಆರೋಗ್ಯ ರಕ್ಷಣೆ, ಶಿಕ್ಷಣ, ಕೌಟುಂಬಿಕ ಆರೈಕೆ ಮತ್ತು ರಕ್ಷಣೆಯ ಕ್ಷೇತ್ರಗಳಲ್ಲಿ ಜೀವನದ ಆರಂಭಿಕ ಹಂತಗಳಿಂದಲೇ ಹೆಣ್ಣುಮಕ್ಕಳು ತಾರತಮ್ಯಕ್ಕೆ ಒಳಗಾಗುತ್ತಾರೆ ಎಂದು ಲಭ್ಯವಿರುವ ಅಂಕಿ ಅಂಶಗಳು ಬಹಿರಂಗಪಡಿಸುತ್ತವೆ. ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಸರಕಾರ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡುತ್ತಿದ್ದರೂ ಪ್ರಕರಣಗಳು ಮರಕಳಿಸುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಮಕ್ಕಳ ಸಹಾಯವಾಣಿ ಮೇಲ್ವಿಚಾರಕ ಸಿದ್ದರಾಜು ಮಾತನಾಡಿ, ಸಂಕಷ್ಟದಲ್ಲಿರುವ ಮಕ್ಕಳನ್ನು ಕಂಡರೆ ಇಲ್ಲಿಗೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ. ಅವರ ಭವಿಷ್ಯವನ್ನು ಬದಲಾಯಿಸಬಹುದಾಗಿದೆ. ಬಾಲ ಕಾರ್ಮಿಕರು ಬೀದಿ ಬದಿ ಮಕ್ಕಳು ಬಿಕ್ಷೆ ಬೇಡುವ ಮಕ್ಕಳು ಕಂಡಬಂದರೆ ಕರೆ ಮಾಡಿ ಇದು ಉಚಿತ ಸಹಾಯವಾಣಿ ಕರೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಪ್ರಕಾಶ್, ಮಕ್ಕಳ ರಕ್ಷಣಾ ಘಟಕದ ಎಂ.ಸಿದ್ದಶೆಟ್ಟಿ, ಶಿಕ್ಷಕರಾದ ನಾಗೇಶ್, ಪುಟ್ಟರಾಜು, ಮಂಚಯ್ಯ, ಲಕ್ಷ್ಮಿ, ಸುಮಾರಕುಮಾರಿ ಹಾಗೂ ಮಕ್ಕಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net