ಹಳೇ ಹಂಪಾಪುರದಲ್ಲಿ ಕಂಡಾಯ ಉತ್ಸವ

12-kglphoto-1
Published on

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದಲ್ಲಿ ಮಂಗಳವಾರ ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಉತ್ಸವ ಶ್ರದ್ಧಾ-ಭಕ್ತಿಯಿಂದ ನಡೆಯಿತು.

ಶ್ರೀ ಕ್ಷೇತ್ರ ಕುರುಬನ ಕಟ್ಟೆ ಮಠದಿಂದ ಕಂಡಾಯಗಳನ್ನು ಹೊತ್ತು ತಂದಿದ್ದ ಶ್ರೀ ಮಠದ ನಿಂಗರಾಜು, ಕುಮಾರ ಹಾಗೂ ಇತರರು ಗ್ರಾಮದ ಹೊರವಲಯದಲ್ಲಿರುವ ಪಂಪ್‌ಹೌಸ್‌ನಲ್ಲಿ ಕಂಡಾಯಗಳನ್ನು ಶುಚಿಗೊಳಿಸಿ ಹೂವು ಹೊಂಬಾಳೆಯಿಂದ ಅಲಂಕಾರ ಮಾಡಿ, ಮಂಗಳವಾದ್ಯ ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ಬೀದಿಗಳಲ್ಲಿ ಶ್ರೀ ಸ್ವಾಮಿಯ ಕಂಡಾಯಗಳನ್ನು ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯಲ್ಲೂ ಪೂಜೆ ಸಮರ್ಪಿಸಲಾಯಿತು.

ಕಂಡಾಯ ಉತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಹೋಮ-ಹವನ ನಡೆದವು. ದೇವಾಲಯದ ಗೋಪುರದ ಕಲಶ ಮರು ಪ್ರತಿಷ್ಠಾಪನೆ ಮಾಡಲಾಯಿತು.

ಕಂಡಾಯಗಳ ಮೆರವಣಿಗೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಹಾದೇವ, ಗ್ರಾಮದ ಯಜಮಾನರಾದ ಲಿಂಗರಾಜು, ಎಂ.ಶ್ರೀಧರ, ಆರ್.ಜಗದೀಶ್, ಡಿ.ಸಿದ್ದರಾಜು, ರಮೇಶ ಹಾಗೂ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net