ನಗರಸಭೆಗೆ ರಾಜ್ಯ ಮಟ್ಟದ ಡೇನಲ್ಮ್ ಪ್ರಶಸ್ತಿ ಗರಿ

11rajesh13
Published on

ಚಾಮರಾಜನಗರ: ಚಾ.ನಗರ ನಗರಸಭೆಯು 2023-24ರಲ್ಲಿ ಡೇ ನಲ್ಮ್ ಅಭಿಮಾನದ ಉಪ ಘಟಕದಲ್ಲಿ ವಸತಿರಹಿತರಿಗೆ ಆಶ್ರಯ ನೀಡುವಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡಿರುವುದನ್ನು ಪ್ರಶಂಸಿಸಿ ರಾಜ್ಯ ಸರ್ಕಾರ ಮಹಿಳಾ ದಿನಾಚರಣೆ ಅಂಗವಾಗಿ ನಗರಸಭೆಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ಹಾಗೂ ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜನೆ ಮಾಡಿದ್ದ 2023-24ನೇ ಸಾಲಿನ ರಾಜ್ಯ ಮಟ್ಟದ ನಗರ ವಸತಿ ರಹಿತರಿಗೆ ಅಶ್ರಯ ನೀಡುವಲ್ಲಿ ಉತ್ತಮ ಸೇವೆಯನ್ನು ನೀಡಿರುವ ನಗರಸಭೆಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನಗರಸಭೆ ಪೌರಾಯುಕ್ತ ರಾಮದಾಸ್, ಸಂಯೋಜಕ ವೆಂಕಟನಾಯಕ, ಅಮ್ಜತ್ ಪಾಷಾ ಅವರು ಇತ್ತೀಚೆಗೆ ಸ್ವೀಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net