ಕಾನ್‌ಸ್ಟೆಬಲ್ ವಿರುದ್ಧ ಮಹಿಳೆ ದೂರು

33e4679f-ecfd-463e-bbde-a47fcdb5e9b1
Published on

ಚಾಮರಾಜನಗರ: ನನ್ನನ್ನು ಮದುವೆಯಾಗಿ ಕಾನ್‌ಸ್ಟೆಬಲ್ ವಂಚಿಸಿದ್ದು, 20 ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಮಹಿಳೆ ಆರೋಪ ಮಾಡಿದ್ದಾರೆ.

ನಗರದ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 3 ವರ್ಷಗಳಿಂದ ನನಗೆ ಪರಿಚಯವಾಗಿದ್ದರು. ಪೊಲೀಸ್ ವಸತಿಗೃಹದಲ್ಲಿ ಇಬ್ಬರೂ ಜತೆಗಿದ್ದೆವು. ದೇವರ ಫೋಟೋ ಮುಂದೆ ನಿಂತು ತಾಳಿ ಕಟ್ಟಿ, ಮದುವೆ ಆಗಿದ್ದರು. ಆದರೆ ಈಗ ಪಾಲಕರ ಒತ್ತಾಯದಿಂದ ನನ್ನ ಜತೆ ಅಂತರ ಕಾಯ್ದಕೊಂಡು ಬೇರೆ ಮದುವೆ ಆಗಲು ತಯಾರಿ ನಡೆಸುತ್ತಿದ್ದಾರೆ. ಪೊಲೀಸರು ದೂರು ಸ್ವೀಕರಿಸದೆ ನನಗೆ ಬುದ್ಧಿವಾದ ಹೇಳುತ್ತಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ನನಗೆ ಈ ಮೊದಲು ವಿವಾಹವಾಗಿದ್ದು, ಒಬ್ಬ ಪುತ್ರಿ ಇದ್ದಳು. ನನ್ನ ಮತ್ತು ಕಾನ್‌ಸ್ಟೆಬಲ್ ಜತೆಗಿನ ಸಂಬಂಧ ತಿಳಿದು ಪತಿ ವಿಚ್ಛೇದನ ನೀಡಿದ್ದರು. ಅಂತರ್ಜಾತಿ ಸಂಬಂಧವಾಗಿರುವುದರಿಂದ ನನ್ನ ತವರು ಮನೆಯವರು ನನ್ನನ್ನು ದೂರ ಮಾಡಿದ್ದು, ನನಗೆ ಯಾರು ಗತಿ ಇಲ್ಲ. ಕಾನ್‌ಸ್ಟೆಬಲ್ ಜತೆಗೆ ನಾನು ಬಾಳಲು ಮಾಡಲು ಅವಕಾಶ ಮಾಡಿಕೊಡಬೇಕು ಎಂದರು. ಸುದ್ದಿಗೋಷ್ಠಿ ನಂತರ ನಗರದ ಮಹಿಳಾ ಪೋಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ವಿಚಾರ ಗೊತ್ತಾಗಿ ದೂರು ನೀಡಲು ಮಹಿಳೆಗೆ ತಿಳಿಸಿದರೂ ಠಾಣೆಗೆ ಬಂದಿರಲಿಲ್ಲ. ಮಂಗಳವಾರ ಮಧ್ಯಾಹ್ನ ದೂರು ದಾಖಲಿಸಿಕೊಂಡಿದ್ದೇವೆ. ತನಿಖೆ ಕೈಗೊಳ್ಳಬೇಕಿದೆ.ಶೇಷಾದ್ರಿ, ಇನ್ಸ್‌ಪೆಕ್ಟರ್, ಮಹಿಳಾ ಪೊಲೀಸ್ ಠಾಣೆ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net