ಶೀಘ್ರ ಎರಡನೇ ಪಟ್ಟಿ ಬಿಡುಗಡೆ

ESHWAR KANDRE congress
Published on

ಚಾಮರಾಜನಗರ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ವರಿಷ್ಠರು ಮಾ.11ರ ನಂತರ ಯಾವ ಸಮಯದಲ್ಲಾದರೂ ಬಿಡುಗಡೆ ಮಾಡಬಹುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಬಣಗಳಿಲ್ಲ. ಪರಿವಾರದಲ್ಲಿ ಅಭಿಪ್ರಾಯಗಳು ಬೇರೆ ಇವೆ. ಇವೆಲ್ಲವನ್ನೂ ನಮ್ಮ ವರಿಷ್ಠರು ಸರಿಪಡಿಸುತ್ತಾರೆ. ಜಾತಿ ಗಣತಿ ವರದಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದರಲ್ಲಿ ಏನಿದೆ ಎಂದು ಯಾರಾದರೂ ನೋಡಿದ್ದೀರಾ? ವರದಿಯಲ್ಲಿ ಏನಿದೆ ಎಂದು ನೋಡಿದ ಮೇಲೆ ಪ್ರತಿಕ್ರಿಯೆ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net