ಕೌಶಲಾಭಿವೃದ್ಧಿ ತರಬೇತಿ ಮುಕ್ತಾಯ

09rajesh05
Published on

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ರೈತರಿಗಾಗಿ ಏಳು ದಿನಗಳ ಕಾಲ ಹಮ್ಮಿಕೊಂಡಿದ್ದ ಜೈವಿಕ ಸೂಕ್ಷ್ಮಾಣು ಜೀವಿಗಳ ಕೌಶಲಾಭಿವೃದ್ಧಿ ತರಬೇತಿ ಗುರುವಾರ ಮುಕ್ತಾಯಗೊಂಡಿತು.

ಕೆವಿಕೆಯ ಸಭಾಂಗಣದಲ್ಲಿ ಮಾ.1ರಿಂದ 7ವರೆಗೆ ತರಬೇತಿ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 15 ರೈತರಿಗೆ ವಿಜ್ಞಾನಿಗಳು ಜೈವಿಕ ಸೂಕ್ಷ್ಮಾಣು ಜೀವಿಗಳಾದ ಟ್ರೈಕೋಡರ್ಮಾ ಉತ್ಪಾದನೆ ಮತ್ತು ಬಳಕೆ, ಕಾಂಪೋಸ್ಟ್ ತಯಾರಿಕೆ, ಎರೆಗೊಬ್ಬರ ಮತ್ತು ಎರೆಜಲ ತಯಾರಿಕೆ, ಜೈವಿಕ ಸೂಕ್ಷ್ಮಾಣು ಜೀವಿಗಳ ಮೌಲ್ಯವರ್ಧನೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಗುರುವಾರ ನಡೆದ ಸಮಾರೋಪ ಸಮಾರಂಭದಲ್ಲಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಶಾಂತ್ ಕೀಲಾರ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದರು. ನಬಾರ್ಡ್ ವ್ಯವಸ್ಥಾಪಕಿ ಹಿತಾ ಸುವರ್ಣಾ, ಕೆವಿಕೆ ಮುಖ್ಯಸ್ಥ ಡಾ.ಯೋಗೇಶ್ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net