ೋಟರ್ ಲಿಪ್ಟಿಂಗ್ ವಾಹನಗಳಿಗೂ ವಿಮೆ ಸೌಲಭ್ಯ

27raju6
Published on

ಚಾಮರಾಜನಗರ: ರಾಜ್ಯಾದ್ಯಂತ ಎಲ್ಲಾ ಮೋಟರ್ ಲಿಪ್ಟಿಂಗ್ ವಾಹನಗಳು ವಿಮೆ ವ್ಯಾಪಿಗೆ ಬರುತ್ತಿವೆ ಎಂದು ಮೋಟಾರ್ ರೀವೈಂಡಿಂಗ್ ಹಾಗೂ ಲಿಪ್ಟಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ಗೌಡಿಕೆ ಪಿ.ನಾಗೇಶ್ ಮಾಹಿತಿ ನೀಡಿದರು.

ತಾಲೂಕಿನ ನಂಜೇದೇವನಪುರದಲ್ಲಿ ಬುಧವಾರ ಆಯೋಜಿಸಿದ್ದ ವೃತ್ತಿ ನಿರತ ಎಲೆಕ್ಟ್ರೀಕಲ್, ಮೋಟಾರ್ ರೀವೈಂಡಿಂಗ್ ಹಾಗೂ ಲಿಪ್ಟಿಂಗ್ ಕಾರ್ಮಿಕರ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಮಿಕರ ಹಿತ ರಕ್ಷಣೆ ಹಾಗೂ ಕುಟುಂಬದ ಭದ್ರತೆಗಾಗಿ ಸಂಘ ಅತ್ಯವಶ್ಯವಾಗಿದ್ದು, ಸಂಘವನ್ನು ಆಧಿಕೃತ ನೋಂದಣಿ ಮಾಡಿಸಿ, ಸದ್ಯದಲ್ಲಿಯೇ ಜಿಲ್ಲಾ ಕೇಂದ್ರದಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಮೋಟರ್ ಲಿಪ್ಟಿಂಗ್ ಮಾಡುವ ವಾಹನಗಳಿಗೆ ವಾಹನ ವಿಮೆ ಹಾಗೂ ಪರವಾನಗಿ ಇಲ್ಲದೇ ಬಹಳ ತೊಂದರೆಯಾಗುತ್ತಿತ್ತು. ಇದರ ಬಗ್ಗೆ ಸರ್ಕಾರ ಗಮನ ಸೆಳೆಯಲು ಕಾರ್ಯ ಸೂಚಿಯನ್ನು ಹಾಕಿಕೊಂಡು ಹೋರಾಟ ಆರಂಭಿಸಿದವು. ಸುತ್ತೂರು ಶ್ರೀಗಳ ಆರ್ಶೀವಾದ ಹಾಗೂ ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ಒತ್ತಾಸೆಯಿಂದ ಸಾರಿಗೆ ಇಲಾಖೆಯಲ್ಲಿ ಮೋಟರ್ ಲಿಪ್ಟಿಂಗ್ ಮಾಡುವ ವಾಹನಗಳಿಗೆ ವಿಮೆ ಸೌಲಭ್ಯ ಕಲ್ಪಿಸಲು ಆದೇಶವಾಗಿದೆ. ಚಾಮರಾಜನಗರ, ಮೈಸೂರು ಭಾಗದ ಕಾರ್ಮಿಕರ ಹೋರಾಟದ ಫಲದಿಂದ ಇದು ಸಾಧ್ಯವಾಗಿದೆ. ಸದ್ಯದಲ್ಲಿಯೇ ನಮ್ಮ ವಾಹನಗಳಿಗೆ ವಿಮೆ ಮಾಡುವಂತೆ ಆರ್‌ಟಿಓಗಳಿಗೆ ಆದೇಶ ಬರುತ್ತವೆ ಎಂದರು.

ರೈತ ಮಿತ್ರ ಎಲೆಕ್ಟ್ರೀಕಲ್, ಮೋಟಾರ್ ರೀವೈಂಡಿಂಗ್ ಹಾಗೂ ಲಿಪ್ಟಿಂಗ್ ಕಾರ್ಮಿಕರ ಸಂಘವನ್ನು ತಾತ್ಕಾಲಿಕವಾಗಿ ರಚನೆ ಮಾಡಿಕೊಂಡು 5 ತಾಲೂಕುಗಳಲ್ಲಿಯೂ, ತಾಲೂಕು ಸಂಘಗಳನ್ನು ರಚನೆ ಮಾಡಿ, ಶೀಘ್ರದಲ್ಲೇ ಸಂಘವನ್ನು ನೋಂದಣಿ ಮಾಡಿಸಿ, ಅಧಿಕೃತವಾಗಿ ಜುಲೈ ತಿಂಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಂಘವನ್ನು ಉದ್ಘಾಟನೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಕೋಣನಪುರ, ಖಜಾಂಚಿ ಕಾಳನಹುಂಡಿ ರೇವಣ್ಣ, ಉಪಾಧ್ಯಕ್ಷ ಜಾಹೀರ್, ನಾಗೇಂದ್ರ ತೆರಕಣಾಂಬಿ, ಚಾ.ನಗರ ರಾಮಣ್ಣ, ಪಿ. ಮರಹಳ್ಳಿ ರಾಜಶೇಖರ್, ಹನೂರು ಮಹದೇವ್, ಗುಂಡ್ಲುಪೇಟೆ ಗುರುಸ್ವಾಮಿ, ಅರಕಲವಾಡಿ ಮಹೇಶ್, ಮೈಸೂರು ಜಿಲ್ಲಾ ಸಂಘ ಅಧ್ಯಕ್ಷ ಪ್ರಭುಸ್ವಾಮಿ, ಅನ್ಸಾರ್, ಕುಮಾರ್, ಸಿದ್ದರಾಜು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net