ಸಹಕಾರ ಸಂಘಗಳಿಂದ ಅಭಿವೃದ್ಧಿ

26raju3
Published on

ಚಾಮರಾಜನಗರ: ಸಹಕಾರ ಸಂಘಗಳ ಸ್ಥಾಪನೆಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಸಹಕಾರ ಸಂಘಗಳ ನಿವೃತ್ತ ಅಧಿಕಾರಿ ಪಿ.ಮಹದೇವಯ್ಯ ಹೇಳಿದರು.

ನಗರದ ನಾಯಕರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಡಾ.ಬಾಬುಜಗಜೀವನರಾಂ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲೆಯ ಆದಿಜಾಂಬವ ಸಮುದಾಯದ ಜಿಲ್ಲಾ ಮಟ್ಟದ ಚಿಂತನ- ಮಂಥನ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳು ಸಮಾಜದ ಸದಸ್ಯರಿಗೆ ಸಹಾಯ ಮಾಡುವ ಉದ್ದೇಶದಿಂದ ರೂಪುಗೊಂಡ ವ್ಯಾಪಾರ ಸಂಸ್ಥೆಯಾಗಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಸಮುದಾಯ ಅಭಿವೃದ್ಧಿಪಡಿಸುವುದು ಟ್ರಸ್ಟ್‌ನ ಗುರಿ. ಜಿಲ್ಲಾ ಕೇಂದ್ರದಲ್ಲಿ ಆದಿಜಾಂಬವ ಸಮುದಾಯದ ಏಳಿಗೆಗಾಗಿ ಸಹಕಾರ ಸಂಘ ಅಗತ್ಯವಾಗಿದೆ. ಆದ್ದರಿಂದ ಶೀಘ್ರವೇ ಜಿಲ್ಲೆಯಲ್ಲಿ ಸಂಘಟನೆ ಮಾಡಿ ಒಮ್ಮ ಅಭಿಪ್ರಾಯ ಪಡೆದು ಸಹಕಾರ ಸಂಘ ಸ್ಥಾಪನೆ ಮಾಡಲಾಗುವುದು ಎಂದರು.

ಪ್ರಗತಿಪರ ಚಿಂತಕ ಅರಕಲವಾಡಿ ನಾಗೇಂದ್ರ, ಬೂದಿತಿಟ್ಟು ರಾಜೇಂದ್ರ, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್, ಡಾ.ಜವರಯ್ಯ ಅರಕಲವಾಡಿ, ನಗರಸಭಾ ಸದಸ್ಯ ಮಹದೇವಯ್ಯ, ರೇವಣ್ಣ, ಗುತ್ತಿಗೆದಾರ ಎಚ್.ಎಚ್.ನಾಗರಾಜು, ಟ್ರಸ್ಟ್ ಕಾರ್ಯದರ್ಶಿ ಶಿವಣ್ಣ, ಗೌರವ ಅಧ್ಯಕ್ಷ ಪಿ.ಚನ್ನಬಸವಯ್ಯ, ಸಂಚಾಲಕ ಅರಕಲವಾಡಿ ಮಹದೇವಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net