ವಿಜೃಂಭಣೆಯಿಂದ ಜರುಗಿದ ಹಾಲರವೆ ಉತ್ಸವ

Published on

ಚಾಮರಾಜನಗರ: ನಾಗವಳ್ಳಿ ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ಹಾಗೂ ನಾಯಕ ಸಮುದಾಯದ ವತಿಯಿಂದ ಶಬರಿಮಲೆ ಅಯ್ಯಪ್ಪಸ್ವಾಮಿ 101ನೇ ಹಾಲರವೆ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ತಾಲೂಕಿನ ನಾಗವಳ್ಳಿ ಗ್ರಾಮದ ದೊಡ್ಡ ಕೆರೆಯ ಸಮೀಪವಿರುವ ಅರಳೀಮರದ ಬಳಿ ಶ್ರೀಮಹದೇಶ್ವರಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಗೆ ಮುಂಜಾನೆಯೇ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ, ಶ್ರೀಮಂಟೇಸ್ವಾಮಿ ದೇವಸ್ಥಾನದ ರಸ್ತೆ ಹಾಗೂ ಇನ್ನಿತರ ಬೀದಿಗಳಲ್ಲಿ ಸಾಗಿ ನಾಯಕ ಸಮುದಾಯದ ಶ್ರೀರಾಮಮಂದಿರಲ್ಲಿ ಸಮಾಪ್ತಿಯಾಯಿತು. ಮೆರವಣಿಗೆಯಲ್ಲಿ 101 ಚಿಣ್ಣರು ಹಾಲರವೆ ಹೊತ್ತು ಸಾಗಿದರು.
ಮೆರವಣಿಗೆಯಲ್ಲಿ ಮಹಿಳೆಯರ ಸ್ಯಾಕ್ಸೋಫೋನ್ ವಾದನ, ಬೀಸು ಕಂಸಾಳೆ, ಹನುಮ ವೇಷಧಾರಿ, ಡೊಳ್ಳು, ನಗಾರಿ, ಮಂಗಳವಾದ್ಯ ಹಾಗೂ ಇನ್ನಿತರ ಜಾನಪದ ಕಲಾ ತಂಡಗಳು ಭಾಗವಹಿಸಿ ನೋಡುಗರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ನಾಯಕ ಸಮುದಾಯದವರು, ಯಜಮಾನರು ಹಾಗೂ ಅಯ್ಯಪ್ಪ ಮಾಲಧಾರಿ ಭಕ್ತರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net