ಕೋರೆಗಾಂವ್ ವಿಜಯೋತ್ಸವ ದಿನ ಆಚರಣೆ

01chn1
Published on

ಚಾಮರಾಜನಗರ: ಜಾತೀಯತೆ, ಅಸಮಾನತೆ, ಗುಲಾಮಗಿರಿಯ ವಿರುದ್ಧದ ಹೋರಾಟ ಕೋರೆಗಾಂವ್ ವಿಜಯೋತ್ಸವ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಹೇಳಿದರು.

ನಗರದ ಭೀಮರಾವ್ ಹೆಬ್ಬಾಗಿಲಿನಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಭೀಮ ಕೋರೆಗಾಂವ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಅವರು ಮಾತನಾಡಿದರು. 18ನೇ ಶತಮಾನದಲ್ಲಿ ಬೇರೂರಿದ್ದ ಜಾತೀಯತೆ, ಅಸಮಾನತೆ ವಿರುದ್ಧ ಕೊರೆಗಾಂವ್ ಬಳಿ 30 ಸಾವಿರ ಸೈನಿಕರಿದ್ದ ಪೇಶ್ವೆಗಳ ವಿರುದ್ಧ 500 ಮಹಾರ್ ಸೈನಿಕರು ಯುದ್ಧ ಮಾಡಿ, ಗೆಲುವು ಸಾಧಿಸಿದ ದಿನವನ್ನೇ ಕೊರೆಗಾಂವ್ ವಿಜಯೋತ್ಸವವಾಗಿ ಆಚರಿಸಲಾಗುತ್ತಿದೆ. 12 ಗಂಟೆಗಳ ಹೋರಾಟದಲ್ಲಿ 22 ಜನ ಹುತಾತ್ಮರಾದರು. ಅಂಬೇಡ್ಕರ್ ಅವರು ಈ ಯುದ್ಧವನ್ನು ಸ್ವದೇಶಿ ಗುಲಾಮಗಿರಿ ವಿರುದ್ಧ ಸ್ವಾಭಿಮಾನದ ಯುದ್ಧ ಎಂದು ಚರಿತ್ರೆಯಲ್ಲಿ ದಾಖಲಿಸಿದ್ದಾರೆ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಸಿಹಿ ವಿತರಣೆ ಮಾಡಲಾಯಿತು. ಜಿಲ್ಲಾ ಸಂಚಾಲಕ ರಂಗಸ್ವಾಮಿ, ಖಜಾಂಚಿ ರವಿಕುಮಾರ್, ಉಮೇಶ್, ಮಂಜೇಶ್, ಯ.ಮಹದೇವಯ್ಯ, ಶಿವಣ್ಣ, ಮಲ್ಲಿಕಾರ್ಜುನ್, ಆಟೋ ಉಮೇಶ್, ಉಮೇಶ್ ಕುಮಾರ್, ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net