

ಚಾಮರಾಜನಗರ : ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 138ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸ್ ಮುಖಂಡರನ್ನು ಗುರುವಾರ ಸನ್ಮಾನಿಸಲಾಯಿತು.
ಪಕ್ಷದಲ್ಲಿನ ಸೇವೆ ಹಾಗೂ ಹಿರಿತನವನ್ನು ಗಮನಿಸಿ ಪಕ್ಷದ ಹಿರಿಯ ಮುಖಂಡರಾದ ಶಿವಪಾದಪ್ಪ, ಪರುಶುರಾಮ್, ಮಹಮದ್‌ಹತ್ತಿಕ್, ಮಹದೇವಯ್ಯ, ಸಿದ್ದರಾಜು, ಲಕ್ಷ್ಮೀನರಸಿಂಹಸ್ವಾಮಿ, ನಂಜನಾಯಕ, ಮಹದೇವಯ್ಯ, ಪದ್ಮಪುರುಷೊತ್ತಮ್, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ ಅವರನ್ನು ಪಕ್ಷದ ವತಿಯಿಂದ ಗೌರವಿಸಲಾಯಿತು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹನೀಯರಿದ್ದಾರೆ. ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತಮ್ಮ ಜೀವ ಸವೆಸಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮಾಡಿ ಸಂಘಟನೆಯನ್ನು ಬಲಪಡಿಸಿದ ಇಂತಹ ಮಹನೀಯರನ್ನು ಪಕ್ಷದ ವತಿಯಿಂದ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲತಾಜತ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಆರ್.ಮಹದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಮಹಮ್ಮದ್ ಅಸ್ಗರ್ ಮುನ್ನಾ, ಮಾಧ್ಯಮ ಕಾರ್ಯದರ್ಶಿಅರುಣ್ ಕುಮಾರ್, ಮುಖಂಡ ಮಹದೇವಶೆಟ್ಟಿ, ನವೀನ್, ಸೋಮನಾಯಕ, ಸೈಯದ್‌ರಫಿ, ಸ್ವಾಮಿ, ನಸ್ರುಲ್‌ಖಾನ್, ನಾಗಯ್ಯ, ಶಿವಮೂರ್ತಿ, ರಂಗಸ್ವಾಮಿ, ಕಾಗಲವಾಡಿ ಶಿವಸ್ವಾಮಿ, ಚಂದ್ರು, ಎಪಿಎಂಸಿ ಸದಸ್ಯ ಸೋಮೇಶ್, ನಟರಾಜು ಭಾಗವಹಿಸಿದ್ದರು.