

ಚಾಮರಾಜನಗರ: ಕೇಂದ್ರ ಸರ್ಕಾರದ ಪಹಲ್ ಯೋಜನೆಯಡಿ ಭಾರತ್ ಗ್ಯಾಸ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಗ್ಯಾಸ್ ಆಫೀಸ್ ಮುಂಭಾಗ ಗ್ರಾಹಕರು ಸಾಲುಗಟ್ಟಿದ್ದರು.
ನಗರದ ಶ್ರೀಭುವನೇಶ್ವರಿ ವೃತ್ತದ ಸಮೀಪದಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿ ಮುಂಭಾಗ ಬುಧವಾರ ಬೆಳಿಗ್ಗೆಯಿಂದಲೇ ನೂರಾರು ಗ್ರಾಹಕರು ಭಾರತ್ ಗ್ಯಾಸ್‌ಗೆ ಆಧಾರ್ ಕಾರ್ಡ್ ಅನ್ನು ನವೀಕರಿಸುವ ಸಲುವಾಗಿ ಕಾದುಕುಳಿತಿದ್ದರು. ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿಯನ್ನು ನೀಡುತ್ತದೆ. ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ನಡುವಿನ ಮೊತ್ತದಲ್ಲಿನ ವ್ಯತ್ಯಾಸವನ್ನು ನೇರವಾಗಿ ಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ.
ಎಲ್‌ಪಿಜಿ ಸಿಲಿಂಡರ್‌ನಲ್ಲಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಅನ್ನು ಗ್ಯಾಸ್ ಸಂಪರ್ಕದೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರ ಪ್ರಾರಂಭಿಸಿರುವ ಪಹಲ್ ಯೋಜನೆಯಡಿಯಲ್ಲಿ ಎಲ್‌ಪಿಜಿಗಾಗಿ ಸಬ್ಸಿಡಿಯನ್ನು ನೇರವಾಗಿ ಆಧಾರ್‌ಗೆ ವರ್ಗಾಯಿಸಲಾಗುತ್ತದೆ. ಈ ಕಾರಣದಿಂದ ಭಾರತ್ ಗ್ಯಾಸ್ ಗ್ರಾಹಕರು ಆಧಾರ್ ಲಿಂಕ್ ಮಾಡಿಸುವ ಸಲುವಾಗಿ ನೂರಾರು ಸಂಖ್ಯೆಯಲ್ಲಿ ಕಾದುಕುಳಿತಿದ್ದರು. ಈ ವೇಳೆ ಕಚೇರಿಯ ಮಾಲೀಕರು ಸಾಲುಗಟ್ಟಿದ ಜನರಿಗೆ ಟೋಕನ್ ನೀಡುವುದರ ಮೂಲಕ ಸರದಿಯಲ್ಲಿ ಆಧಾರ್ ಲಿಂಕ್ ಮಾಡಿಸಲು ಅನುವುಮಾಡಿಕೊಟ್ಟರು.