ಶಿಲ್ಪಾನಾಗ್‌ಗೆ ಜಲ ಪ್ರಹಾರಿ ಸಮ್ಮಾನ್

16chn3
Published on

ಚಾಮರಾಜನಗರ: ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ಕೇಂದ್ರ ಸರ್ಕಾರದಿಂದ ಜಲ ಪ್ರಹಾರಿ ಸಮ್ಮಾನ್ ಪ್ರಶಸ್ತಿ ದೊರೆತಿದೆ.

ದೆಹಲಿಯಲ್ಲಿ ಡಿ.13ರಂದು ಕೇಂದ್ರ ಜಲಶಕ್ತಿ ಸಚಿವಾಲಯದ ವತಿಯಿಂದ ಶಿಲ್ಪಾನಾಗ್ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಇವರು ಈ ಹಿಂದೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆಯಾಗಿದ್ದರು. ಈ ಸಂದರ್ಭದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಪ್ರಗತಿ ಸಾಧಿಸಿದ್ದರು. ಈ ಗಣನೀಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ.

ಗಮನ ಸೆಳೆಯುತ್ತಿರುವ ಡಿಸಿ: ಜಿಲ್ಲಾಧಿಕಾರಿಯಾಗಿ ಚಾಮರಾಜನಗರಕ್ಕೆ ನಿಯುಕ್ತಿಗೊಂಡ ಬಳಿಕ ಶಿಲ್ಪಾನಾಗ್ ಗಮನ ಸೆಳೆಯುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಶಕ್ತರ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ನೊಂದಣಿ, ಶಾಲೆ ಬಿಟ್ಟ ಬುಡಕಟ್ಟು ಮಕ್ಕಳಿಗೆ ಮರಳಿ ಶಿಕ್ಷಣ ಕೊಡಿಸುವ ಕಾರ್ಯಕ್ರಮ ಸೇರಿದಂತೆ ಇನ್ನಿತರೆ ಸಮಾಜಮುಖಿ ಕಾರ್ಯಗಳು ಜನರಿಂದ ಮೆಚ್ಚುಗೆ ಪಡೆದುಕೊಂಡಿವೆ. ಅಪಘಾತದಿಂದ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net