ಶ್ರೀ ಮಂಟೇಸ್ವಾಮಿ ದೇವಸ್ಥಾನ ಗೋಪುರ ಮತ್ತು ಕಳಸರೋಹಣ

04chn8
Published on

ಚಾಮರಾಜನಗರ: ಸಮೀಪದ ಮಲ್ಲಯ್ಯನಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮಂಟೇಸ್ವಾಮಿ ದೇವಸ್ಥಾನದ ಗೋಪುರ, ಕಳಸರೋಹಣ ಕಾರ್ಯಕ್ರಮ ಸೋಮವಾರ ವಿಜೃಂಭನೆಯಿಂದ ನೆರವೇರಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿ ಹಾಗೂ ಕನಿಷ್ಟ ವೇತನ ಸಲಹ ಸಮಿತಿಯ ಮಾಜಿ ಅಧ್ಯಕ್ಷ ಎಸ್‌ಪಿಕೆ ಗ್ರೂಪ್‌ನ ಮಾಲೀಕ ಉಮೇಶ್ ಮಾತನಾಡಿ, ಗ್ರಾಮದಲ್ಲಿ ಗ್ರಂಥಾಲಯ ಹಾಗೂ ಅಂಬೇಡ್ಕರ್ ಭವನಗಳು ನಿರ್ಮಾಣವಾಗಬೇಕು. ಇದರಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ. ಮಲ್ಲಯ್ಯನಪುರ ಗ್ರಾಮದ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅದ್ಯತೆ ನೀಡೋಣ. ಈ ಬಗ್ಗೆ ಶಾಸಕರೊಂದಿಗೆ ಪ್ರಸ್ತಾಪ ಮಾಡಿ ದಲಿತ ಸಮುದಾಯಕ್ಕೆ ಅಗತ್ಯವಾದ ಅಂಬೇಡ್ಕರ್ ಸಮುದಾಯ ಭವನ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಅದ್ಯತೆ ನೀಡುವುದಾಗಿ ತಿಳಿಸಿದರು.
ಗ್ರಾಮದಲ್ಲಿ ಶ್ರೀಮಂಟೇಸ್ವಾಮಿ ದೇವಸ್ಥಾನ ನಿರ್ಮಾಣವಾಗಿರುವುದು ಶುಭ ಸಂದೇಶವಾಗಿದೆ. ಶ್ರದ್ದೆ, ಭಕ್ತಿಯಿಂದ ಭಗವಂತನನ್ನು ಪೂಜಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸುಖ ಶಾಂತಿ ಲಭಿಸಲಿದೆ ಎಂದರು.

ವೇದಿಕೆಯಲ್ಲಿ ಕ್ಷೇತ್ರಾ ಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ, ಉತ್ತರ ಖಂಡ ( ರೂರ್ಕಿ) ಭೂವಿಜ್ಞಾನಿ ಆರ್. ಧರ್ಮರಾಜ್, ತಾ.ಪಂ. ಮಾಜಿ ಸದಸ್ಯ ಮಲ್ಲೇದೇವರು, ಗ್ರಾ.ಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಎಂ. ಶಿವಣ್ಣ, ಶೋಭಾರಾಣಿ, ಶಿವಕುಮಾರ್, ಯುವ ಮುಖಂಡ ಕುಸುಮರಾಜ್, ಯಜಮಾನರಾದ ಎಂ.ಎನ್. ಮಹದೇವ್, ಚಿಕ್ಕಮಹದೇವ್, ಚಿಕ್ಕನಾಗಣ್ಣ, ಸಂಪತ್‌ಕುಮಾರ್, ರಮೇಶ್, ಚಂದ್ರಶೇಖರ್, ನಾಗರಾಜು, ಮಂಟೇಸ್ವಾಮಿ, ಹಾಗೂ ಮಹದೇಶ್ವರಸ್ವಾಮಿ ದೇವರಗುಡ್ಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net