

ಚಾಮರಾಜನಗರ: ನಗರದ ಸಿಪಿಆರ್ ಎಜುಕೇಷನ್ ಟ್ರಸ್ಟ್ ವತಿಯಿಂದ ವೆಂಕಟಮ್ಮ, ವೆಂಕಟಶೆಟ್ಟಿ, ನಾಗಮ್ಮ ಮತ್ತು ಪುಟ್ಟಶೆಟ್ಟಿ ನೆನಪಿನಾರ್ಥವಾಗಿ ದಾಸ ಬಣಜಿಗರ ಸಮುದಾಯದ 30ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕಾಗಿ 2 ಲಕ್ಷ ರೂ.ಗಳಿಗೆ ಹೆಚ್ಚು ಹಣವನ್ನು ವಿದ್ಯಾರ್ಥಿ ವೇತನವಾಗಿ ವಿತರಣೆ ಮಾಡಲಾಯಿತು.
ನಗರದ ಚಿಕ್ಕಂಗಡಿ ಬೀದಿಯಲ್ಲಿರುವ ಶ್ರೀರಾಮಮಂದಿರದಲ್ಲಿ ಸಿಪಿಆರ್ ಎಜುಕೇಷನ್ ಟ್ರಸ್ಟ್ ಹಾಗೂ ದಾಸ ಬಣಜಿಗರ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಪಿ. ರಾಜಣ್ಣ, ಸಿ.ಕೆ. ಜಯಶ್ರೀ ವಿದ್ಯಾರ್ಥಿ ವೇತನ ವಿತರಿಸಿದರು. ಗೌರವ ಅಧ್ಯಕ್ಷ ವಿಜಯಕುಮಾರ್, ನಗರಸಭಾ ಸದಸ್ಯ ಹಾಗೂ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಚಿ ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಹರೀಶ್‌ಕುಮಾರ್, ನಿರ್ದೇಶಕರಾದ ಪದ್ಮಾ ಪುರುಷೊತ್ತಮ್, ಲತಾ ನಟರಾಜು, ಪುಷ್ಪಾ ನಾಗರತ್ನಾ, ಶ್ರೀಧರ್ ಹಾಗೂ ಮುಖಂಡರು, ಪಾಲಕರು ಇದ್ದರು.