ಬಾಳೆ ಬೆಳೆಯ ಕುರಿತು ವಿಚಾರ ಸಂಕಿರಣ

02chn9
Published on

ಗುಂಡ್ಲುಪೇಟೆ: ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ಚಾಮರಾಜನಗರ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಶುಕ್ರವಾರ ಬಾಳೆ ಬೆಳೆಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಾಳೆ ಬೆಳೆಯಲು ಬೇಕಾಗುವ ಬೇಸಾಯ ಕ್ರಮಗಳು, ಬಾಳೆ ಬೆಳೆಯಲು ಬೇಕಾಗುವ ಮಣ್ಣು, ಹವಾಮಾನ, ಕಾಲ, ಮುಂತಾದವುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸಸ್ಯರೋಗ ವಿಜ್ಞಾನಿ ಡಾ.ಪಂಪನಗೌಡ ಮಾತನಾಡಿ, ಬಾಳೆಯ ವಿವಿಧ ತಳಿಗಳಾದ ಏಲಕ್ಕಿ, ನೆಂಧ್ರನ್, ೂವನ್, ಗ್ರಾಂಡ್ ನೈನ್, ರಸಬಾಳೆ ಹೀಗೆ ಅನೇಕ ತಳಿಗಳ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬೇರೆ ಬೇರೆ ತಳಿಗಳು ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ಇರುವರಿಯನ್ನು ನೀಡುತ್ತವೆ. ಮಣ್ಣು ಪರೀಕ್ಷೆ ಮಾಡಿಸುವುದು ಮುಖ್ಯವಾಗುತ್ತದೆ. ಬಾಳೆಯಲ್ಲಿ ಕಂದುಗಳ ಆಯ್ಕೆ ತುಂಬಾ ಮುಖ್ಯವಾಗಿರುತ್ತದೆ, ಇದರ ಮೇಲೆಯೇ ಬಾಳೆ ಇಳುವರಿಯನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಬಿತ್ತನೆಗೆ ಕತ್ತಿ ಕಂದು ಬಳಸುವುದು ಸೂಕ್ತ. ನೀರು ಕಂದನ್ನು ಬಳಸಬಾರದು. ಬಾಳೆಯಲ್ಲಿ ಕಾಣಿಸಿಕೊಳ್ಳುವ ಮುಖ್ಯ ರೋಗಗಳಲ್ಲಿ ಎಲೆ ಚುಕ್ಕೆ ರೋಗವೂ ಒಂದಾಗಿದ್ದು, ಇದನ್ನು ಶಿವನ ಕಣ್ಣಿನ ರೋಗ ವೆಂದು ಕೂಡ ಕರೆಯುತ್ತಾರೆ. ಬಾಳೆಯನ್ನು ನೆಡುವುದಕ್ಕಿಂತ ಮುಂಚೆ ಕಂದುಗಳನ್ನು ಉಪಚರಿಸುವುದನ್ನು ತಿಳಿದುಕೊಳ್ಳಬೇಕು. ಬಾಳೆಯಲ್ಲಿ ಕಾಣಿಸಿಕೊಳ್ಳುವ ಕೀಟಗಳ ಬಗ್ಗೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಬೇಸಾಯದ ನಂತರ ಕೈಗೊಳ್ಳುವ ಚಟುವಟಿಕೆಗಳಾದ ಮಣ್ಣು ಎರಾಕುವುದು,ಎಲೆ ಕೀಳುವುದು, ಆಸರೆ ನೀಡುವುದು, ಕಳೆ ನಿರ್ವಹಣಾ ಕ್ರಮಗಳನ್ನು ಸೂಕ್ತ ಸಮಯಕ್ಕೆ ಮಾಡಬೇಕು.ಗಾತ್ರಗಳ ಆಧಾರದ ಮೇಲೆ ಕಟದುಗಳನ್ನು ವಿಂಗಡಿಸಿ ಬಿತ್ತನೆ ಮಾಡುವುದರಿಂದ ಮಾರ್ಕೆಟ್ ಬೆಲೆಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ನಾಗರಾಜ್, ಕೃಷಿ ವಿದ್ಯಾರ್ಥಿಗಳು, ಗ್ರಾಮದ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net