ಪಾರ್ಶ್ವನಾಥಸ್ವಾಮಿ ಜೈನಬಸದಿಯಲ್ಲಿ ದೀಪೋತ್ಸವ

02chn8
Published on

ಚಾಮರಾಜನಗರ: ಕಾರ್ತಿಕ ಮಾಸದ ಅಂಗವಾಗಿ ಶ್ರೀವಿಜಯ ಪಾರ್ಶ್ವನಾಥಸ್ವಾಮಿ ಜೈನಬಸದಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ನಡೆಯಿತು.

ನಗರದ ಕಲಾ ಸರಸ್ವತಿ ನಾಟ್ಯ ಸಂಸ್ಥೆಯ ಡಾ.ಅಕ್ಷತಾ ಎಸ್.ಜೈನ್ ಮತ್ತು ತಂಡದವರು ಜಿನವಾಣಿ ಶೃತಿಗಳಿಗೆ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಬಸದಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಕ್ತಾಧಿಗಳು ಆಗಮಿಸಿ ದೇವರದರ್ಶನ ಪಡೆದರು ಎಂದು ಅರ್ಚಕ ಪ್ರೇಮಚಂದ್ರ ತಿಳಿಸಿದರು.

ಮೊದಲಿಗೆ ಜೈನಬಸದಿಯಲ್ಲಿರುವ ಮಹಾಮಾತೆ ಶ್ರೀಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಿ, ಕುಂಕುಮಾರ್ಚನೆ ಮಾಡಿ ಮಹಾಮಂಗಳಾರತಿ ಪೂಜೆ ಸಲ್ಲಿಸಲಾಯಿತು. ದೀಪೋತ್ಸವ ನಿಮಿತ್ತ ಜೈನಬಸದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು. ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net