70 ಸಾವಿರ ರೂ. ಎಗರಿಸಿದ ಖದೀಮ

Crime Logo
Published on

ಕೊಳ್ಳೇಗಾಲ : ಸಹಾಯ ಮಾಡುವ ನೆಪದಲ್ಲಿ ಶುಕ್ರವಾರ ಕಳ್ಳನೊಬ್ಬ ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್ ಬದಲಿಸಿ 70 ಸಾವಿರ ರೂ.ಗಳನ್ನು ಲಪಟಾಯಿಸಿದ್ದಾನೆ.

ಚಾಮರಾಜನಗರ ತಾಲೂಕಿನ ಗಂಗವಾಡಿ ಗ್ರಾಮದ ಆರ್.ಸೋಮಣ್ಣ ವಂಚನೆಗೊಳಗಾದವರು. ಅವರು ಮನೆ ಸಾಮಗ್ರಿ ತರುವ ಉದ್ದೇಶಕ್ಕೆ ಹಣ ತೆಗೆದುಕೊಳ್ಳಲು ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಹಣ ತೆಗೆಯಲು ಹಲವು ಬಾರಿ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ.
ಇದನ್ನು ಗಮನಿಸುತ್ತ ಪಕ್ಕದಲ್ಲಿಯೇ ನಿಂತಿದ್ದ ಅಪರಿಚಿತ ವ್ಯಕ್ತಿ ಸಹಾಯಕ್ಕೆ ಬಂದು ಪಾಸ್‌ವರ್ಡ್ ಕೇಳಿ ಹಣ ತೆಗೆದುಕೊಂಡುವಂತೆ ನಾಟಕ ಮಾಡಿದ್ದಾನೆ.

ಬಳಿಕ ಕಾರ್ಡ್ ಬದಲಿಸಿ ಹಣ ಬರುತ್ತಿಲ್ಲ ಎಂದು ನಕಲಿ ಕಾರ್ಡ್ ಕೊಟ್ಟಿದ್ದಾನೆ. ಅದನ್ನು ಪಡೆದು ಊರಿನ ಕಡೆಗೆ ನಡೆದ ಸೋಮಣ್ಣ ಅವರಿಗೆ 70 ಸಾವಿರ ರೂ. ಡ್ರಾ ಆಗಿರುವ ಬಗ್ಗೆ ಪೋನ್‌ಗೆ ಮೆಸೇಜ್ ಬಂದಿದೆ. ಗಾಬರಿಗೊಂಡ ಸೋಮಣ್ಣ ಬ್ಯಾಂಕ್ ಗೆ ತೆರಳಿ ಅಕೌಂಟ್‌ಲಾಕ್ ಮಾಡಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net