

ಯಳಂದೂರು: ಇರಸವಾಡಿ ಗ್ರಾಮದಿಂದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ ತಾಲೂಕಿನ ಇಂದಿರಾನಗದ ನಿವಾಸಿ ಯಮನೂರಪ್ಪನ ಪುತ್ರಿ ರೇಷ್ಮಾ(14) ನಾಪತ್ತೆಯಾಗಿರುವ ಬಾಲಕಿ. ಯಮನೂರಪ್ಪ ಕುಟುಂಬ ಸಮೇತರಾಗಿ ಕೂಲಿ ಅರಸಿ ಇರಸವಾಡಿ ಗ್ರಾಮಕ್ಕೆ ಆಗಮಿಸಿದ್ದರು. ಇತ್ತೀಚೆಗೆ ಇವರ ಪತ್ನಿ ದೀಪಾವಳಿ ಹಬ್ಬಕ್ಕೆ ಕೊಪ್ಪಳಕ್ಕೆ ಹೋಗಿದ್ದರು. ಆಕೆಯನ್ನು ಕರೆತರಲು ಪತಿ ಯಮನೂರಪ್ಪ ಕೊಪ್ಪಳಕ್ಕೆ ಹೋಗಿದ್ದರು. ವಾಪಸ್ ಮನೆಗೆ ಬಂದು ನೋಡಿದಾಗ ರೇಷ್ಮಾ ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ವೇಳೆ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.