ನಗರ ಪ್ರದಕ್ಷಿಣೆ ಹಾಕಿದ ಡಿಸಿ

23chn4
Published on

ಚಾಮರಾಜನಗರ: ಸಮರ್ಪಕವಾಗಿ ಕಸ ವಿಲೇವಾರಿಯಾಗದೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಣ್ಣು, ಧೂಳು ತುಂಬಿ ತುಳುಕುತ್ತಿರುವ ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಗುರುವಾರ ಬೆಳಗ್ಗೆ ದಿಢೀರ್ ಪ್ರದಕ್ಷಿಣೆ ಮಾಡಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಡಿಸಿ ಭೇಟಿ ನೀಡಿದರು. ಪ್ರಯಾಣಿಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿರುವ ಶೌಚಗೃಹದಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸೂಚನೆ ನೀಡಿದರು. ಕುಡಿಯುವ ನೀರಿನ ಸೌಕರ್ಯವನ್ನು ಗಮನಿಸಿದರು. ಮಹಿಳಾ ಪ್ರಯಾಣಿಕರ ವಿಶ್ರಾಂತಿ ಗೃಹಕ್ಕೆ ಭೇಟಿ ನೀಡಿ ಸ್ವಚ್ಛತೆ ಕಾಪಾಡಲು ತಿಳಿಸಿದರು. ಈ ವೇಳೆ ಕಾಲೇಜು ವಿದ್ಯಾರ್ಥಿನಿಯರನ್ನು ಮಾತನಾಡಿಸಿದರು. ಇಲ್ಲಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸೂಚನೆ ನೀಡಿದರು. ಬಳಿಕ ಲಾರಿ ಸ್ಟಾೃಂಡ್ ಬಳಿಗೆ ತೆರಳಿ ಶೌಚಗೃಹ ವೀಕ್ಷಣೆ ಮಾಡಿದರು. ಸಿಬ್ಬಂದಿಗೆ ಸ್ವಚ್ಛತೆ ಕಾಪಾಡಬೇಕೆಂದು ತಿಳಿಸಿದರು.

ಲಾರಿ ಸ್ಟಾೃಂಡ್ ಬಳಿ ಕಸ ಸುರಿಯುತ್ತಿರುವುದನ್ನು ಗಮನಿಸಿದ ಡಿಸಿ ಸಿ.ಟಿ.ಶಿಲ್ಪಾನಾಗ್, ಈ ಸ್ಥಳದಲ್ಲಿ ಕಸ ಹಾಕಬಾರದು. ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಇಲ್ಲಿ ಕಸ ಹಾಕುವವರಿಗೆ ದಂಡ ಹಾಕಿ ಎಂದು ಸೂಚನೆ ನೀಡಿದರು. ನಗರಸಭೆ ಪೌರಯುಕ್ತ ರಾಮದಾಸ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net