

ಚಾಮರಾಜನಗರ: ನಗರದ ಮಕ್ಕಳ ಸ್ನೇಹಿ ನ್ಯಾಯಾಲಯಲದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆಗೊಂಡ ಎ.ಸಿ ನಿಶಾರಾಣಿ ಅವರನ್ನು ಜಿಲ್ಲಾ ವಕೀಲರ ಸಂಘದ ವತಿಯಿಂದ ಬುಧವಾರ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ನ್ಯಾ.ಎ.ಸಿ ನಿಶಾರಾಣಿ ಮಾತನಾಡಿ, ಈ ವರೆಗೂ ವಕೀಲರ ಸಹಕಾರ, ನ್ಯಾಯಾಧೀಶರುಗಳ ಸಹಕಾರ ಮಾರ್ಗದರ್ಶನದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಮುಂಬರುವ ನ್ಯಾಯಾಧೀಶರಿಗೂ ಇದೇ ರೀತಿಯ ಸಹಕಾರ ನೀಡಿ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಕೆ.ಎಂ.ನಿವಾಸಮೂರ್ತಿ ಮಾತನಾಡಿ, ಮಕ್ಕಳ ಸ್ನೇಹಿ ನ್ಯಾಯಾಧೀಶರಾದ ನಿಶಾರಾಣಿ ಉತ್ತಮ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಅವರು ಮುಂದಿನ ದಿನದಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಲಿ ಎಂದು ಶುಭ ಹಾರೈಸಿದರು. ಇದೇ ಸಮಯದಲ್ಲಿ ನ್ಯಾಯಾಧೀಶೆ ಎ.ಸಿ.ನಿಶಾರಾಣಿ ಅವರಿಗೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಮತ್ತು ಭಾಷಣ ಪುಸ್ತಕವನ್ನು ಸಂಘದ ಮಾಜಿ ಅಧ್ಯಕ್ಷ ರಾಮಸಮುದ್ರ ಪುಟ್ಟಸ್ವಾಮಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಕರ ಸಂಘದ ಉಪಾಧ್ಯಕ್ಷ ಎಂ.ಶಿವರಾಂ, ಪ್ರಧಾನ ಕಾರ್ಯದರ್ಶಿ ಉತ್ತುವಳ್ಳಿ ಕುಮಾರ್, ಹಿರಿಯ ವಕೀಲರಾದ ಪುಟ್ಟರಾಜು, ಸಿ.ಎನ್.ರವಿಕುಮಾರ್, ಆರ್.ವಿರೂಪಾಕ್ಷ, ಶಿವಲಿಂಗೇಗೌಡ, ಷಡಕ್ಷರಿಸ್ವಾಮಿ, ಸಂಘದ ಸದಸ್ಯರಾದ ಸಿ.ಎನ್.ಮಾಧು, ಕೆ.ಪಿ.ನಾಗರಾಜು, ಸಿ.ಚಿನ್ನಸ್ವಾಮಿ, ಸೋಮಣ್ಣ,ಉದಯ್, ರಂಗಸ್ವಾಮಿ, ಸವಿತಾ, ಮಂಜುಳ, ಮೇಘಾ, ಶ್ರೀನಿವಾಸ್, ನಟರಾಜು, ಶ್ರೀನಿವಾಸ್, ಶಿವಕುಮಾರ್,ಶರತ್, ಮಧುಶ್ರೀ ಹಾಗೂ ಇತರರು ಹಾಜರಿದ್ದರು.