ಎ.ಸಿ.ನಿಶಾರಾಣಿಯವರ ಸೇವೆ ಸ್ಮರಣೀಯ

22chn1
Published on

ಚಾಮರಾಜನಗರ: ಜಿಲ್ಲಾ ನ್ಯಾಯಾಲಯದ ೆಕ್ಸೋ ನ್ಯಾಯಾಧಿಶರಾದ ಎ.ಸಿ.ನಿಶಾರಾಣಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ಜಿಲ್ಲಾ ವಕೀಲರ ಸಂಘದ ವತಿಯಿಂದ ಬುಧವಾರ ಬಿಳ್ಕೋಡುಗೆ ನೀಡಿ ಸನ್ಮಾನಿಸಲಾಯಿತು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲರುವ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೋಕ್ಸೋ ನ್ಯಾಯಧೀಶೆ ಎ.ಸಿ.ನಿಶಾರಾಣಿ ಅವರನ್ನು ಸನ್ಮಾನಿಸಿ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಬಿ. ಎಸ್. ಭಾರತಿ ಮಾತನಾಡಿ, ನ್ಯಾಯದ ಹಿತದೃಷ್ಟಿಯಿಂದ ವಕೀಲರು ನ್ಯಾಯಧೀಶರುಗಳಿಗೆ ಉತ್ತಮ ಸಹಕಾರ ನೀಡಬೇಕು. ಆಗಿದ್ದಲ್ಲಿ ಮಾತ್ರ ಒಳ್ಳೆಯ ಕೆಲಸಗಳನ್ನು ಮಾಡಬಹುದು. ಈ ನಿಟ್ಟಿನಲ್ಲಿ ನಿಶಾರಾಣಿ ಅವರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದ್ದಾರೆ ಅದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ನ್ಯಾಯಧೀಶ ಎಂ.ಆರ್.ಲೋಕಪ್ಪ, ಮಾತನಾಡಿ ನ್ಯಾಯಾಧೀಶರುಗಳಿಗೆ ಕೆಲಸದ ಒತ್ತಡ ತುಂಬಾ ಇರುತ್ತದೆ. ಈ ನಡುವೆಯೂ ಕಾರ್ಯನಿರ್ವಹಿಸುತ್ತಿರುವಾಗ ವಕೀಲರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಧೀಶರೊಂದಿಗೆ ವಕೀಲರು ಸಹಕರಿಸಬೇಕು ಎಂದರು. ನ್ಯಾಯಧೀಶೆ ಎ.ಸಿ.ನಿಶಾರಾಣಿ ಮಾತನಾಡಿ, ನಗರದ ವಕೀಲರು ಉತ್ತಮ ವ್ಯಕ್ತಿತ್ವ ಉಳ್ಳವರು ನಿಮ್ಮಗಳ ಒಳ್ಳೆಯ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ವರ್ಗಾವಣೆ ಗೊಂಡಿರುವ ನ್ಯಾಯಾಧೀಶೆ ನಿಶಾರಾಣಿ ಅವರು ಕಳೆದ ಒಂದೂವರೆ ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಇವರ ಸೇವೆ ನೆನಪಿನಲ್ಲಿಯುಳಿತ್ತದೆ ಎಂದರು.

ಈ ವೇಳೆ ನ್ಯಾಯಧೀಶರಾದ ಬಿ. ಎಸ್.ಹೊನ್ನಸ್ವಾಮಿ, ಎಂ.ಶ್ರೀಧರ್, ಚಂಪಕ, ವೆಂಕಟೇಶ್, ನಿವೇದಿತಾ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಕೆ. ವಿರೂಪಾಕ್ಷ ಸ್ವಾಮಿ, ಸರ್ಕಾರಿ ಅಭಿಯೋಜಕ ಶಿವಕುಮಾರ್, ಜಿಲ್ಲಾ ಸರ್ಕಾರಿ ವಕೀಲ ಎಸ್.ಗುರುಸ್ವಾಮಿ, ಕೆ. ಯೋಗೀಶ್, ಅಭಿರಕ್ಷಕ ವಕೀಲ ಸಿ. ಎನ್.ರವಿಕುಮಾರ್, ವಿಶೇಷ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಸ್ವಾಮಿ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಮಲ್ಲು, ಸೌಮ್ಯವತಿ, ಮಹಾಲಿಂಗ ಗಿರ್ಗಿ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net