ಕ್ಯಾಂಟರ್ ಡಿಕ್ಕಿಯಾಗಿ ಪಾದಚಾರಿಗೆ ಗಾಯ

08raju6
Published on

ಚಾಮರಾಜನಗರ: ತಾಲೂಕಿನ ಅಟ್ಟಗೂಳಿಪುರದ ರಸ್ತೆಯಲ್ಲಿ ಕ್ಯಾಂಟರ್ ಡಿಕ್ಕಿ ಹೊಡೆದು ಪಾದಚಾರಿಗೆ ಗಾಯಗಳಾಗಿವೆ. ಗ್ರಾಮದ ನಿವಾಸಿ ನಾರಾಯಣ(41) ಅವರ ಕೈ ಮತ್ತು ಎದೆಗೆ ಪೆಟ್ಟು ಬಿದ್ದಿದೆ. ಅಪಘಾತಕ್ಕೆ ಕಾರಣವಾದ ಕ್ಯಾಂಟರ್ ಚಾಲಕ ತಮಿಳುನಾಡಿನ ಸುರೇಶ್ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ಮುಂಜಾನೆ 3 ಗಂಟೆ ಸುಮಾರಿನಲ್ಲಿ ನಾರಾಯಣ ನಡೆದುಕೊಂಡು ಹೋಗುತ್ತಿದ್ದಾಗ ಕ್ಯಾಂಟರ್ ಡಿಕ್ಕಿ ಹೊಡೆದು ಪರಾರಿಯಾಯಿತು. ವಿಷಯ ತಿಳಿದ 112 ಪೊಲೀಸರು ಸುಮಾರು 13 ಕಿ.ಮೀ. ದೂರ ಕ್ರಮಿಸಿದ್ದ ಕ್ಯಾಂಟರ್ ಚಾಲಕ ಸುರೇಶ್‌ನನ್ನು ಹಿಡಿದರು. ಗಾಯಾಳು ನಾರಾಯಣ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net