

ಚಾಮರಾಜನಗರ : ಜಿಲ್ಲೆ ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಅವರನ್ನು ಬೆಂಗಳೂರಿನ ಕನ್ನಡ ಜನಶಕ್ತಿಕೆಂದ್ರದಿಂದ ಕೊಡಮಾಡುವ ಸುವರ್ಣ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ಜೈಭುವನೇಶ್ವರಿ ಕನ್ನಡ ಯುವವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದಲ್ಲಿರುವ ಶ್ರೀಭುವನೇಶ್ವರಿ ಪ್ರತಿಮೆಯ ಮುಂಭಾಗ ಶುಕ್ರವಾರ ಚಾ.ರಂ.ಶ್ರೀನಿವಾಸಗೌಡ ಅವರನ್ನು ಸನ್ಮಾನಿಸಿ ಹಿರಿಯ ಹೋರಾಟಗಾರ ಶಾ.ಮುರುಳಿ ಮಾತನಾಡಿದರು. ಗಡಿ ಜಿಲ್ಲೆಯಲ್ಲಿ ಚಾ.ರಂ.ಶ್ರೀನಿವಾಸ್ ಹಲವಾರು ವರ್ಷಗಳ ಕಾಲ ಕನ್ನಡ ನೆಲ, ಜಲ, ಸಂಸ್ಕೃತಿಯ ಬಗ್ಗೆ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರನ್ನು ಗುರುತಿಸಿ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಪ್ರಯುಕ್ತ ಬೆಂಗಳೂರಿನ ಕನ್ನಡ ಜನಸಕ್ತಿ ಕೇಂದ್ರ ಸುವರ್ಣ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಮಾಡಿರುವುದು ಅತ್ಯಂತ ಖುಷಿನೀಡಿದೆ. ನ.5 ರಂದು ಬೆಂಗಳೂರಿನ ಜೆ.ಸಿ ನಗರದ ಕನ್ನಡ ಭವನದಲ್ಲಿ ಅಭಿನಂದನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು, ಚಾ.ವೇ. ರಾಜಗೋಪಾಲ್, ನಿಜಧ್ವನಿ ಗೋವಿಂದರಾಜು, ಪುರುಷೋತ್ತಮ್, ರಾಜು ಪಣ್ಯದಹುಂಡಿ, ಚಾ.ಹ.ರಾಮು, ಸಿದ್ದಶೆಟ್ಟಿ, ತಾಂಡವಮೂರ್ತಿ ಹಾಗೂ ಇತರರು ಹಾಜರಿದ್ದರು.