

ಚಾಮರಾಜನಗರ: ಚಾ.ನಗರ ವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ನೇಮಕಾತಿ ಆದೇಶಪತ್ರ ಕೊಡುವ ವಿಚಾರದಲ್ಲಿ ಸಿಮ್ಸ್ ಡೀನ್ ಡಾ.ಮಂಜುನಾಥ್ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ತಿಳಿಸಿದರು.
ಸಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಹೊರಗುತ್ತಿಗೆ ನೌಕರರು ನಕಲಿ ಪ್ರಮಾಣ ಪತ್ರ ನೀಡಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಗುರುತಿಸುವ ಉದ್ದೇಶದಿಂದ ನೇಮಕಾತಿ ಆದೇಶ ಪತ್ರ ನೀಡುವಂತೆ ತಿಳಿಸಲಾಗಿದೆ. ಆದೇಶ ಪತ್ರ ಪಡೆದುಕೊಳ್ಳಲು ಯಾರಿಗೂ ಒಂದು ರೂಪಾಯಿ ಹಣ ಕೊಡಬಾರದು ಎಂದು ಹೇಳಲಾಗಿದೆ. ನೌಕರಿಗೆ ಸರಿಯಾದ ಸಮಯಕ್ಕೆ ಸಂಬಳ, ಇಎಸ್‌ಐ, ಪಿಎ್ ಕಟ್ಟಿಕೊಡಲಾಗುತ್ತಿದೆ. ಸಮವಸ ನೀಡುವಂತೆ ಸೂಚಿಸಲಾಗಿದೆ. ಈ ಸಂಬಂಧ ಸಿಮ್ಸ್ ಆಡಳಿತ ಮಂಡಳಿ ಹಾಗೂ ನಿರ್ದೇಶಕರ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಶುಕ್ರವಾರ ಜಿಲ್ಲಾ ಶಸಚಿಕಿತ್ಸಕರ ಕೊಠಡಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಪ್ರಸ್ತುತ ಸಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 600 ಬೆಡ್‌ಗಳಿದ್ದು, 300 ಬೆಡ್‌ಗಳಿಗೆ ಅಗುವಷ್ಟು ಮಾತ್ರ ನೌಕರರು ಇದ್ದು ಎಲ್ಲರೂ ಸೌಹಾರ್ದಯುತವಾಗಿ ಕೆಲಸಮಾಡಿಕೊಂಡು ಹೋಗುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಸುಮಾರು 230 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಅವರನ್ನು ಮತ್ತೆ ನೇಮಕಮಾಡಿಕೊಳ್ಳುವಂತೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಬೇಕಾಗಿತ್ತು. ಆದರೆ ಅದು ಆಗಲಿಲ್ಲ. ಕೆಲವು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಸಿಮ್ಸ್ ಡೀನ್ ಮೇಲೆ ಆರೋಪ ಮಾಡಿರುವವರು ಯಾರು ಕೂಡ ಹೊರಗುತ್ತಿಗೆ ನೌಕರರಲ್ಲ. ಶೇ.90 ರಷ್ಟು ಹೊರಗುತ್ತಿಗೆ ನೌಕರರು ನೇಮಕಾತಿ ಆದೇಶ ಪ್ರತಿಯನ್ನು ಮೇಲಾಧಿಕಾರಿಗಳಿಗೆ ನೀಡಿದ್ದಾರೆ. ಅನಧಿಕೃತ ನೇಮಕಾತಿ ಪತ್ರ ಪಡೆದು ಕೆಲಸ ಮಾಡುತ್ತಿರುವವರ ಮೇಲೆ ಕ್ರಮವಹಿಸಲಾಗಿದೆ. ಇದರಲ್ಲಿ ಯಾವ ಗೊಂದಲವನ್ನು ಸೃಷ್ಟಿಮಾಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು.
ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ಮಾತನಾಡಿ, ಜಿಲ್ಲೆಯ ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅನೇಕ ಕೆಲಸಗಳನ್ನು ಮಾಡಬೇಕಿದೆ. ಆದರೆ ಅನಾವಶ್ಯಕವಾಗಿ ಕೆಲವು ವಿಚಾರಗಳು ನಮ್ಮ ಸಮಯವನ್ನು ಆಳುಮಾಡುತ್ತದೆ. ಸದ್ಯಕ್ಕೆ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರದಲ್ಲಿ ಪೊಲೀಸ್ ವಿಚಾರಣೆಯಲ್ಲಿದೆ. ಸಿಮ್ಸ್ ಹೊರಗುತ್ತಿಗೆ ನೌಕರರಲ್ಲಿ ಯಾವುದೇ ಸಂಘಟನೆ ಇಲ್ಲ. ನಮ್ಮ ನೌಕರರು ಒಗ್ಗಟ್ಟಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಮೇಲೆ ಆರೋಪ ಮಾಡುತ್ತ ಇರುವವರ ಹಿನ್ನೆಲೆ ಅರಿತುಕೊಂಡರೆ ಸತ್ಯಾಸತ್ಯತೆಗಳು ಹೊರಬರುತ್ತದೆ ಎಂದರು.
ಸದ್ಯಕ್ಕೆ ಇರುವ ವ್ನಿೇಶ್ವರ ಸೆಕ್ಯುರಿಟಿ ಏಜೆನ್ಸಿಯನ್ನು ಬದಲಾಯಿಸಲು ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಹೊರಗುತ್ತಿಗೆ ನೌಕರರಿಗೆ ನೇಮಕಾತಿ ಆದೇಶಪತ್ರ ನೀಡಲು ಹೇಳಿರುವುದು, ಅನಧಿಕೃತ ನೌಕರರನ್ನು ಪತ್ತೆ ಹಚ್ಚುವ ಸಲುವಾಗಿಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ. ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಕರೆದು ವಿಚಾರಿಸಿದ್ದೇನೆ. ಹೊರಗಿನವರ ಅಸ್ತಕ್ಷೇಪ ಇದರಲ್ಲಿ ಸಲ್ಲದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಶಸಚಿಕಿತ್ಸಕ ಡಾ.ಕೃಷ್ಣಪ್ರಸಾದ್, ಡಾ.ಮಾರುತಿ, ಡಾ.ನವೀನ್‌ಚಂದ್ರ ಹಾಗೂ ಇತರರು ಹಾಜರಿದ್ದರು.